ಕ್ವಾಡ್​ ದೇಶಗಳ ಮಲಬಾರ್ 2021 ಸೇನಾ ಸಮರಾಭ್ಯಾಸ ಶುರು

masthmagaa.com:

ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಮತ್ತು ಭಾರತದ ನೌಕಾಪಡೆಗಳು ಇವತ್ತಿನಿಂದ ಫಿಲಿಪ್ಪಿನ್ ಸಮುದ್ರದಲ್ಲಿ ‘ಮಲಬಾರ್ 2021’ ಅನ್ನೋ ಹೆಸರಿನಲ್ಲಿ ಕವಾಯತು ಶುರು ಮಾಡಿವೆ. ಆಗಸ್ಟ್ 26ರಿಂದ 29ನೇ ತಾರೀಖಿನವರೆಗೆ ಈ ಎಕ್ಸರ್​ಸೈಸ್​ ನಡೆಯಲಿದೆ. ಅಂದ್ಹಾಗೆ 1992ರಲ್ಲಿ ಮೊದಲ ಬಾರಿ ಅಮೆರಿಕ ಮತ್ತು ಭಾರತದ ನೌಕಾಪಡೆಗಳು ಮಲಬಾರ್ ಮಾರಿಟೈಮ್​ ಎಕ್ಸರ್​ಸೈಸ್ ಮಾಡಿದ್ವು. 2015ರಲ್ಲಿ ಜಪಾನ್​ ಮತ್ತು 2020ರಲ್ಲಿ ಆಸ್ಟ್ರೇಲಿಯಾದ ನೌಕಸೇನೆಗಳು ಇದಕ್ಕೆ ಸೇರಿದ್ವು. 2002ರಿಂದ ಇದನ್ನ ಪ್ರತಿವರ್ಷ ನಡೆಸಲಾಗ್ತಿದೆ. ಈ ವರ್ಷ ನಡೀತಿರೋದು 25ನೇ ಆವೃತ್ತಿಯ ಮಲಬಾರ್ ಎಕ್ಸರ್​ಸೈಸ್​.

-masthmagaa.com

Contact Us for Advertisement

Leave a Reply