ರಷ್ಯಾದಿಂದ ಕ್ಷಿಪಣಿ ವ್ಯವಸ್ಥೆ ಖರೀದಿಸಿದ್ದಕ್ಕೆ ಭಾರತದ ಮೇಲೆ ಅಮೆರಿಕ ನಿರ್ಬಂಧ!

masthmagaa.com:

ರಷ್ಯಾದಿಂದ ಎಸ್​ 400 ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದ ಮಾಡ್ಕೊಂಡಿರೋ ಭಾರತದ ಮೇಲೆ CAATSA ಅಂದ್ರೆ ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್​​ ಥ್ರೂ ಸ್ಯಾಂಕ್ಷನ್ ಆಕ್ಟ್​​ ಅಡಿಯಲ್ಲಿ ನಿರ್ಬಂಧ ಹೇರಬಾರದು ಅಂತ ಸೆನೆಟರ್​ಗಳು ಆಗ್ರಹಿಸಿದ್ದಾರೆ. ಈ ಬಗ್ಗೆ ಸೀನಿಯರ್ ಸೆನೆಟರ್​​ಗಳಾದ ಮಾರ್ಕ್​ ವಾರ್ನರ್ ಮತ್ತು ಜಾನ್ ಕಾರ್ನಿನ್​​​​ ಅಮೆರಿಕ ಅಧ್ಯಕ್ಷ ಜೋ ಬೈಡೆನ್​​ಗೆ ಪತ್ರ ಬರೆದಿದ್ದಾರೆ. 2019ರ ಅಕ್ಟೋಬರ್​ನಲ್ಲಿ ಭಾರತ- ರಷ್ಯಾ ನಡುವೆ 543 ಕೋಟಿ ಡಾಲರ್​​ ಮೊತ್ತದಲ್ಲಿ 5 ಎಸ್​ 400 ಖರೀದಿಸುವ ಸಲುವಾಗಿ ಒಪ್ಪಂದ ಏರ್ಪಟ್ಟಿತ್ತು. ಆದ್ರೆ ಇದ್ರಿಂದ ಅಮೆರಿಕ ಭಾರತದ ಮೇಲೆ CAATSA ಅಡಿಯಲ್ಲಿ ನಿರ್ಬಂಧ ವಿಧಿಸಬಹುದು ಅಂತ ವರದಿಯಾಗಿತ್ತು. ಸೋವಿಯತ್ ಒಕ್ಕೂಟ ಇದ್ದಾಗಿನಿಂದಲೂ ಭಾರತ ಅಲ್ಲಿಂದ ಶಸ್ತ್ರಾಸ್ತ್ರ ಖರೀದಿಸುತ್ತಾ ಬಂದಿದೆ. ಆದ್ರೆ ಭಾರತ ಕಳೆದ ಹಲವು ವರ್ಷಗಳಲ್ಲಿ ರಷ್ಯಾದಿಂದ ಶಸ್ತ್ರಾಸ್ತ್ರ ಆಮದನ್ನು ಕಡಿಮೆ ಮಾಡಲು ಹಲವು ಹೆಜ್ಜೆ ಇಟ್ಟಿದೆ. ಹೀಗಾಗಿ ಭಾರತದ ಮೇಲೆ ನಿರ್ಬಂಧಗಳನ್ನು ಹೇರಬಾರದು ಅಂತ ಸೆನೆಟರ್​​ಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

-masthmagaa.com

Contact Us for Advertisement

Leave a Reply