ಯುಕ್ರೇನ್​ನಲ್ಲಿ ವಾಯುನೆಲೆ ಟಾರ್ಗೆಟ್ ಮಾಡಿದ ರಷ್ಯಾ! 35 ಸಾವು

masthmagaa.com:

ಯುಕ್ರೇನ್​ನಲ್ಲಿ ರಷ್ಯಾ ದಾಳಿ ಇವತ್ತು 18ನೇ ದಿನಕ್ಕೆ ಕಾಲಿಟ್ಟಿದೆ. ಪೂರ್ವ ಯುಕ್ರೇನ್​​ನ ಲಿವ್​ ನಗರದಲ್ಲಿರೋ ಮಿಲಿಟರಿ ಟ್ರೇನಿಂಗ್ ಗ್ರೌಂಡ್​​​ ಮೇಲೆ ರಷ್ಯಾ ಸೇನೆ ಹಲವು ಏರ್​ ಸ್ಟ್ರೈಕ್ ನಡೆಸಿದೆ. ಇದು ಪೋಲೆಂಡ್ ಗಡಿಗೆ ಹತ್ತಿರದಲ್ಲಿರೋ ನಗರವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಲಿವ್ ನಗರದ ಸ್ಥಳೀಯ ಆಡಳಿತದ ಮುಖ್ಯಸ್ಥ, ರಷ್ಯಾ ಇಂಟರ್​​​ನ್ಯಾಷನಲ್ ಸೆಂಟರ್ ಫರ್ ಪೀಸ್​ಕೀಪಿಂಗ್​ & ಸೆಕ್ಯೂರಿಟಿ ಮೇಲೆ ಏರ್​ಸ್ಟ್ರೈಕ್ ನಡೆಸಿದೆ. ಇದ್ರಲ್ಲಿ 35 ಮಂದಿ ಪ್ರಾಣ ಕಳ್ಕೊಂಡಿದ್ದು, 57 ಮಂದಿ ಗಾಯಗೊಂಡಿದ್ದಾರೆ.. ಒಂದಲ್ಲ ಎರಡಲ್ಲ.. 30 ರಾಕೆಟ್​​ಗಳನ್ನು ಉಡಾಯಿಸಿದೆ ಅಂತ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಯುಕ್ರೇನ್ ರಕ್ಷಣಾ ಸಚಿವ ಒಲೆಕ್ಸಿ ರೆಜ್ನಿಕೋವ್​​, ಇದೊಂದು ಭಯೋತ್ಪಾದನಾ ದಾಳಿಯಾಗಿದೆ. ಈ ಕೇಂದ್ರದಲ್ಲಿ ಫಾರಿನ್​ ಇನ್​ಸ್ಟ್ರಕ್ಟರ್ಸ್​​ಗಳು ಕೂಡ ಇದ್ರು. ಯೂರೋಪಿಯನ್ ಯೂನಿಯನ್ ಮತ್ತು ನ್ಯಾಟೋ ಗಡಿಯಲ್ಲಿ ಶಾಂತಿ ಮತ್ತು ಭದ್ರತೆಯ ಮೇಲೆ ನಡೆದ ಉಗ್ರ ದಾಳಿ.. ಇದನ್ನು ತಡೆಯಲು ಕ್ರಮ ಕೈಗೊಳ್ಳಲೇಬೇಕು.. ನ್ಯಾಟೋ ಈಗಲಾದ್ರೂ ಯುಕ್ರೇನ್​ನಲ್ಲಿ ನೋ ಫ್ಲೈ ಝೋನ್ ಅಂತ ಘೋಷಿಸಬೇಕು ಅಂತ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply