ಬೈಡನ್‌ ಹಿಂಬಾಲಕರಿಗೆ AI ರೋಬೊ ಕಾಲ್‌ ಮೂಲಕ ನಕಲಿ ಸಂದೇಶ!

masthmagaa.com:

ಅಮೆರಿಕದ ಪ್ರಾಂತ್ಯವೊಂದರಲ್ಲಿ US ಪ್ರೆಸಿಡೆಂಟ್‌ ಜೋ ಬೈಡನ್‌ ಹೆಸರಲ್ಲಿ ಮತದಾರರಿಗೆ ಫೇಕ್‌ ಕಾಲ್‌ ಮಾಡಿರೋದು ವರದಿಯಾಗಿದೆ. ಮಂಗಳವಾರ ಪ್ರೈಮರಿ ವೋಟಿಂಗ್‌ಗೆ ಇಲ್ಲಿನ ನ್ಯೂ ಹಾಂಪ್‌ಶೈರ್‌ ಪ್ರಾಂತ್ಯ ಸಜ್ಜಾಗಿತ್ತು. ಆದ್ರೆ ಬೈಡನ್‌ ಧ್ವನಿಯ ಮಾದರಿಯಲ್ಲೇ AI ರೋಬೊಕಾಲ್ ಮೂಲಕ ಬೈಡೆನ್‌ ಬೆಂಬಲಿಗರಿಗೆ ಪ್ರೈಮರಿ ವೋಟಿಂಗ್‌ ಮಾಡದೇ ಮನೆಯಲ್ಲೇ ಉಳಿಯುವಂತೆ ಫೇಕ್ ಕಾಲ್‌ನಲ್ಲಿ ಹೇಳಲಾಗಿದೆ. ಜೊತೆಗೆ ಈ ದಿನ ಟ್ರಂಪ್‌ರನ್ನ ಮರು ಆಯ್ಕೆ ಮಾಡುವ ರಿಪಬ್ಲಿಕನ್ನರಿಗೆ ಮಾತ್ರ ವೋಟಿಂಗ್‌ ಅವಕಾಶ ನೀಡಲಾಗಿದೆ. ಬೈಡನ್‌ ಹಿಂಬಾಲಕರಿಗೆ ನಿಮ್ಮ ಮತವನ್ನ ನವೆಂಬರ್‌ ಎಲೆಕ್ಷನ್‌ಗೆ ಕಾಯ್ದಿರಿಸಿ ಅಂತ ಕರೆಯಲ್ಲಿ ಹೇಳಲಾಗಿದೆಯಂತೆ. ಇದರ ಬೆನ್ನಲ್ಲೇ ಈ ಫೇಕ್ ಕಾಲ್‌ ಬಗ್ಗೆ ತನಿಖೆ ನಡೆಸೋದಾಗಿ ನ್ಯೂ ಹಾಂಪ್‌ಶೈರ್‌ನ ಅಟಾರ್ನಿ ಜನರಲ್‌ ಕಚೇರಿ ಹೇಳಿದೆ.

-masthmagaa.com

Contact Us for Advertisement

Leave a Reply