ಕೃಷಿ ಕಾನೂನು ವಾಪಸ್ ಬಳಿಕವೂ ರೈತರ ಮಹಾಪಂಚಾಯತ್​!

masthmagaa.com:

ಉತ್ತರ ಪ್ರದೇಶ: ಕೃಷಿ ಸುಧಾರಣೆಯನ್ನು ವಾಪಸ್ ಪಡೆದ್ರೂ ಪ್ರತಿಭಟನಾಕಾರರು ತಮ್ಮ ಹೋರಾಟ ಅಂತ್ಯಗೊಳಿಸ್ತಿಲ್ಲ. ಮತ್ತಷ್ಟು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೋರಾಟ ಮುಂದುವರಿಸಿದ್ದಾರೆ. ಅದ್ರ ಭಾಗವಾಗಿಯೇ ಇವತ್ತು ಉತ್ತರ ಪ್ರದೇಶದ ಲಕ್ನೋದಲ್ಲಿ ಕಿಸಾನ್ ಮಹಾಪಂಚಾಯತ್ ಆಯೋಜಿಸಲಾಗಿತ್ತು. ಇದ್ರಲ್ಲಿ ಬಾರಿ ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದಾರೆ. ದೊಡ್ಡ ಮೆರವಣಿಗೆ ಮೂಲಕ ಬಂದ ಸಾವಿರಾರು ಪ್ರತಿಭಟನಾಕಾರರು ಮಹಾಪಂಚಾಯತ್​ನಲ್ಲಿ ಭಾಗಿಯಾಗಿದ್ದಾರೆ. ಇದ್ರಲ್ಲಿ ಮಾತನಾಡಿದ ಭಾರತ್ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕೈತ್​​, ಸರ್ಕಾರ ಕೃಷಿ ಸುಧಾರಣೆ ಕಾನೂನುಗಳನ್ನು ರದ್ದುಪಡಿಸಿರೋದನ್ನು ಖಾತ್ರಿಪಡಿಸಬೇಕು. ಎಂಎಸ್​​ಪಿಯನ್ನು ಖಾತ್ರಿಪಡಿಸಬೇಕು. ಇನ್ನು ಹಲವು ಬೇಡಿಕೆಗಳಿದ್ದು, ಅವುಗಳನ್ನು ಈಡೇಸಿಬೇಕು. ಜೊತೆಗೆ ನಮ್ಮೊಂದಿಗೆ ಮಾತುಕತೆ ನಡೆಸಬೇಕು. ಆಮೇಲಷ್ಟೇ ನಾವು ಮನೆ ಕಡೆ ಹೋಗ್ತೀವಿ ಅಂತ ಹೇಳಿದ್ದಾರೆ. ಜೊತೆಗೆ ಮುಂಬರುವ ದಿನಗಳಲ್ಲಿ ಸರಣಿ ಪ್ರತಿಭಟನೆಗೆ ನಿರ್ಧರಿಸಿರೋ ಸಂಯುಕ್ತ್ ಕಿಸಾನ್ ಮೋರ್ಚಾ, ನವೆಂಬರ್ 29ಕ್ಕೆ ಸಂಸತ್ ಚಲೋಗೆ ಕರೆ ನೀಡಿದೆ. ಜೊತೆಗೆ ಕೇಂದ್ರ ಸರ್ಕಾರದ ಮುಂದೆ 6 ಬೇಡಿಕೆ ಇಟ್ಟಿದೆ. ಅದ್ರಲ್ಲಿ ಪ್ರತಿಭಟನೆಯಲ್ಲಿ ಮೃತಪಟ್ಟವರ ಹೆಸರಲ್ಲಿ ಸ್ಮಾರಕ ನಿರ್ಮಾಣ ಕೂಡ ಸೇರಿದೆ.

masthmagaa.com:

Contact Us for Advertisement

Leave a Reply