ಅಣ್ಣಾ ಉಪವಾಸ ಕ್ಯಾನ್ಸಲ್​​​ಗೆ ಕಾರಣ ಏನು ಗೊತ್ತಾ? ಶಿವಸೇನೆ ಕೆಂಡ!

masthmagaa.com:

ಮುಂಬೈ: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿಚಾರದಲ್ಲಿ ಅಣ್ಣಾ ಹಜಾರೆಯವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಅಂತ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ. ಅಣ್ಣಾ ಹಜಾರೆ ಈ ಹಿಂದೆ ರೈತರನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳೋದಾಗಿ ಹೇಳಿದ್ರು. ಆದ್ರೆ ನಿನ್ನೆ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನಾವಿಸ್ ಭೇಟಿಯಾದ ಬಳಿಕ ತನ್ನ ನಿರ್ಧಾರವನ್ನು ಬದಲಿಸಿ, ಉಪವಾಸ ಸತ್ಯಾಗ್ರಹವನ್ನು ಕ್ಯಾನ್ಸಲ್ ಮಾಡಿದ್ರು.

ಇದೇ ವಿಚಾರವಾಗಿ ಕಿಡಿಕಾರಿರುವ ಸಾಮ್ನಾ, ರೈತರ ಪ್ರತಿಭಟನೆ ವಿಚಾರದಲ್ಲಿ ಅಣ್ಣಾ ಹಜಾರೆ ನಿಲುವು ಏನು ಅಂತ ನಮಗೆ ಗೊತ್ತಾಗುತ್ತಿಲ್ಲ.. ಹೀಗಾಗಿ ಅಣ್ಣಾ ಹಜಾರೆಯವರೇ ಅವರ ನಿಲುವನ್ನು ಸ್ಪಷ್ಟಪಡಿಸಬೇಕು ಅಂತ ಹೇಳಿದೆ. ಜೊತೆಗೆ ದೆಹಲಿ ಗಡಿಯಲ್ಲಿ ವಯಸ್ಸಾದ ರೈತರು ಕೂಡ ಬಂದು ಪ್ರತಿಭಟನೆ ನಡೆಸುತ್ತಿದ್ದು, ಅಣ್ಣಾ ಹಜಾರೆ ರಾಲೆಗನ್ ಸಿದ್ಧಿ(ಪುಣೆಯಿಂದ 120 ಕಿ.ಮೀ ದೂರದಲ್ಲಿರೋ ಪ್ರದೇಶ)ಯಲ್ಲಿ ಕುಳಿತು ಪ್ರತಿಭಟನೆ ನಡೆಸಬೇಕು ಅಂತ ಒತ್ತಾಯಿಸಿದೆ.

ಜೊತೆಗೆ ಕೇಂದ್ರದ ವಿರುದ್ಧವೂ ಕಿಡಿಕಾರಿರುವ ಸಾಮ್ನಾ, ಕೇಂದ್ರ ಸರ್ಕಾರ ರೈತರ ಹೋರಾಟವನ್ನು ದಮನಿಸಲು ಯತ್ನಿಸುತ್ತಿದೆ. ರೈತರನ್ನು ಇಂಟರ್​​ನ್ಯಾಷನಲ್ ಕ್ರಿಮಿನಲ್ಸ್ ಅನ್ನೋ ರೀತಿಯಲ್ಲಿ ಬಿಂಬಿಸಲಾಗ್ತಿದೆ ಅಂತ ಹೇಳಿದೆ.

ಅಂದಹಾಗೆ ನಿನ್ನೆ ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಂಡಿದ್ದ ಅಣ್ಣಾಹಜಾರೆಯವರು ಅದಕ್ಕೆ ಕಾರಣ ಕೂಡ ನೀಡಿದ್ರು. ತಮ್ಮ ನಿರ್ಧಾರ ಬದಲಿಸಿದ ಬಳಿಕ ಮಾತನಾಡಿದ್ದ ಅಣ್ಣಾ ಹಜಾರೆ, ನಾನು 3 ವರ್ಷಗಳಿಂದ ರೈತರ ಪರವಾಗಿ ಧನಿ ಎತ್ತುತ್ತಿದ್ದೇನೆ. ರೈತರು ತಮ್ಮ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಹೀಗಾಗಿ ಸರ್ಕಾರ ಎಂಎಸ್​​ಪಿ ಅಂದ್ರೆ ಬೆಂಬಲ ಬೆಲೆಯನ್ನು ಶೇ.50ರಷ್ಟು ಹೆಚ್ಚಿಸೋದಾಗಿ ಭರವಸೆ ನೀಡಿದೆ ಅಂತ ಹೇಳಿದ್ದರು.

-masthmagaa.com

Contact Us for Advertisement

Leave a Reply