ಫಾರೂಖ್ ಅಬ್ದುಲ್ಲಾ ಮಗಳು ಮತ್ತು ಸಹೋದರಿ ಬಂಧನ..!

ಜಮ್ಮು ಕಾಶ್ಮೀರ: ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಫರೂಕ್ ಅಬ್ದುಲ್ಲಾ ಅವರ ಸಹೋದರಿ ಸುರೈಯಾ ಮತ್ತು ಮಗಳು ಸಾಫಿಯಾರನ್ನು ವಶಕ್ಕೆ ಪಡೆಯಲಾಗಿದೆ. ಇವರಿಬ್ಬರು ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ನಿರ್ಧಾರದ ವಿರುದ್ಧ ಪ್ರತಿಭಟಿಸುತ್ತಿದ್ದರು ಎಂದು ತಿಳಿದುಬಂದಿದೆ.

ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಇದೇ ಮೊದಲ ಬಾರಿಗೆ ಮಹಿಳೆಯರು ಪ್ರತಿಭಟನೆ ನಡೆಸಿದ್ರು. ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾರ ಸಹೋದರಿ ಸುರೈಯಾ ಮತ್ತು ಮಗಳು ಸಾಫಿಯಾ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಿಆರ್​ಪಿಎಫ್​ ಮಹಿಳಾ ತಂಡದ ಮೂಲಕ ವಶಕ್ಕೆ ಪಡೆಯಲಾಯ್ತು. ಆದ್ರೆ ಯಾವ ಸಂಘಟನೆ ಅಥವಾ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು ಅನ್ನೋದು ಮಾತ್ರ ಇನ್ನೂ ತಿಳಿದುಬಂದಿಲ್ಲ.

ಜಮ್ಮು ಕಾಶ್ಮೀರದಲ್ಲಿ ಇಂದಿನಿಂದ ಪೋಸ್ಟ್​ ಪೇಯ್ಡ್​ ಸೇವೆ ಆರಂಭವಾಗಿದ್ದು, ಎಲ್ಲವೂ ಸಾಮಾನ್ಯವಾಗಿದೆ. ಆದ್ರೆ ಮಾಜಿ ಸಿಎಂಗಳಾದ ಮೆಹಬೂಬ ಮುಫ್ತಿ ಮತ್ತು ಫಾರೂಖ್ ಅಬ್ದುಲ್ಲಾರನ್ನು ಇನ್ನೂ ಗೃಹಬಂಧನದಲ್ಲಿ ಇಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಇಬ್ಬರನ್ನೂ ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ಬಂಧನದಲ್ಲಿ ಇಡಲಾಗಿದೆ ಎಂದಿದ್ದಾರೆ.

Contact Us for Advertisement

Leave a Reply