ಪಾಪರಾಜಿಗಳಿಂದ ಬೇಸತ್ತು ಕಾನೂನಾತ್ಮಕ ಹೋರಾಟಕ್ಕೆ ಮುಂದಾದ ಆಲಿಯಾ ಮತ್ತು ರಣಬೀರ್‌ ದಂಪತಿ..

masthmagaa.com:

ಸೆಲೆಬ್ರಿಟಿಗಳ ಪೋಟೋ ಕ್ಲಿಕ್ಕಿಸಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ವ್ಯಕ್ತಿಗಳನ್ನ ಪಾಪರಾಜಿಗಳು ಅಂತಾ ಕರೆಯುತ್ತಾರೆ. ಇವರು ಒಂದು ರೀತಿಯಲ್ಲಿ ಸೆಲೆಬ್ರಿಟಿಗಳಿಗೆ ಪ್ರಚಾರಕ್ಕೆ ಸಹಕಾರಿ ಆದರೆ ಇನ್ನೋಂದು ಕಡೆ ಅವರ ಖಾಸಗಿ ಜೀವನಕ್ಕೆ ತೊಂದರೆ ಆಗುತ್ತಾರೆ. ಇವರು ಯಾವಾಗಲೂ ಸೆಲೆಬ್ರೆಟಿಗಳ ಹಿಂದೇ ಇರುತ್ತಾರೆ. ಇವರನ್ನ ಚಿತ್ರರಂಗದ ಒಂದು ಭಾಗ ಅಂತಾನೆ ಹೇಳಬಹುದು. ಪಾಪರಾಜಿಗಳು ಮಿತಿ ಮೀರಿ ನಡೆದುಕೊಂಡರೆ ತಾರೆಯರ ಜೀವನಕ್ಕೆ ಅಡ್ಡಿಯಾಗತ್ತೆ. ಈಗ ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ದಂಪತಿ ಪಾಪರಾಜಿಗಳ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದಾರೆ. ಆಲಿಯಾ ಭಟ್‌ ಅವರು ಮನೆಯ ಬಾಲ್ಕನಿಯಲ್ಲಿ ನಿಂತಿದ್ದಾಗ ಪಕ್ಕದ ಮನೆಯ ಟೆರೇಸ್‌ ಹತ್ತಿದ್ದ ಕೆಲವು ಪಾಪರಾಜಿಗಳು ಇವರ ಫೋಟೋ ಕ್ಲಿಕ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಮಾಡಿದ್ದರು. ಇದರಿಂದ ಆಲಿಯಾ ಖಾಸಗಿತನಕ್ಕೆ ಧಕ್ಕೆ ಆಗಿದೆ ಎಂದಿದ್ದರು. ಅನೇಕ ಸೆಲೆಬ್ರಿಟಿಗಳು ನಟಿಯನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದರು.
ರಣಬೀರ್‌ ಕಪೂರ್‌ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿ, ʼಪಾಪರಾಜಿಗಳು ಖಾಸಗಿತನವನ್ನ ಆಕ್ರಮಿಸಿಕೊಂಡಿದ್ದಾರೆ. ನನ್ನ ಮನೆ ಒಳಗೆ ಏನು ಬೇಕಾದರೂ ನಡೆಯಬಹುದು. ಅದನ್ನು ನೀವು ಚಿತ್ರೀಕರಿಸಬಾರದು. ಏಕೆಂದರೆ ಅದು ನನ್ನ ಮನೆ. ನಾವು ಇದನ್ನು ಕಾನೂನಾತ್ಮಕವಾಗಿ ಡೀಲ್‌ ಮಾಡುತ್ತೀದ್ದೇವೆ. ನಾನು ಅದರ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ಅದು ತುಂಬಾ ಕೊಳಕು ಎಂದಷ್ಠೇ ಹೇಳಬಹುದುʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಪರಾಜಿಗಳಿಂದ ಹಲವರಿಗೆ ಬಹಳಷ್ಟು ಪ್ರಚಾರ ಸಿಕ್ಕಿದೆ. ಹೀಗಾಗಿ ಅವರ ಬಗ್ಗೆ ರೆಸ್ಪೆಕ್ಟ್‌ ಇದೆ. ʼನಾನು ಪಾಪರಾಜಿಗಳನ್ನು ಗೌರವಿಸುತ್ತೇನೆ. ಪಾಪರಾಜಿಗಳು ಸಿನಿಮಾರಂಗದ ಒಂದು ಭಾಗ ಅನ್ನೋದು ನನ್ನ ಅಭಿಪ್ರಾಯ. ಅವರು ನಮ್ಮೊಂದಿಗೆ ಕೆಲಸ ಮಾಡುತ್ತಾರೆ, ನಾವು ಅವರೊಂದಿಗೆ ಕೆಲಸ ಮಾಡುತ್ತೇವೆ. ಆದರೆ, ಕೆಲವರು ಈ ರೀತಿ ವರ್ತಿಸಿದಾಗ ಮುಜುಗರ ಆಗುತ್ತದೆ. ಎಂದು ರಣಬೀರ ಪಾಪರಾಜಿಗಳ ವಿರುದ್ಧ ಬೇಸರಗೊಂಡಿದ್ದಾರೆ.

-masthmagaa.com

Contact Us for Advertisement

Leave a Reply