ಭಾರತದ ಫುಟ್ಬಾಲ್‌ ಸಂಸ್ಥೆ ಮೇಲೆ ಹೇರಿದ್ದ ಬ್ಯಾನ್‌ನ್ನ ತೆರವುಗೊಳಿಸಿದ ಫಿಫಾ!

masthmagaa.com:

ಭಾರತೀಯ ಫುಟ್ಬಾಲ್ ಸಂಸ್ಥೆ ಮೇಲೆ ಫಿಫಾ ಹೇರಿದ್ದ ಬ್ಯಾನ್‌ನ್ನ ತೆರವುಗೊಳಿಸಲಾಗಿದೆ. ಇದರೊಂದಿಗೆ ಅಂಡರ್-17 ಮಹಿಳಾ ವಿಶ್ವಕಪ್ 2022ರ ಆತಿಥ್ಯ ಭಾರತಕ್ಕೆ ಸಿಗೋದು ಪಕ್ಕಾ ಆಗಿದೆ. ಅಂದ್ಹಾಗೆ ಸಂಸ್ಥೆಯ ಆಡಳಿತದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಇದೆ ಅಂತೇಳಿ ಭಾರತ ಫುಟ್ಬಾಲ್‌ ತಂಡವನ್ನ ಫಿಫಾ ರದ್ದುಗೊಳಿಸಿತ್ತು. ಬಳಿಕ ಕೇಸ್‌ ಸುಪ್ರೀಂ ಕೋರ್ಟ್‌ನ ಅಂಗಳಕ್ಕೆ ಹೋಗಿತ್ತು. ಅಲ್ಲಿ AIFFನ ಆಡಳಿತ ವ್ಯವಹಾರಗಳನ್ನು ನಡೆಸಲು ನೇಮಿಸಲಾಗಿದ್ದ ತ್ರಿಸದಸ್ಯ ಸಮಿತಿಯನ್ನು ಸುಪ್ರೀಂ ವಜಾಗೊಳಿಸಿತ್ತು, ಇದ್ರ ಬೆನ್ನಲ್ಲೇ ಈಗ ತಕ್ಷಣವೇ ಜಾರಿಗೆ ಬರುವಂತೆ AIFF ಅಮಾನತುಗೊಳಿಸುವಿಕೆಯನ್ನು ತೆಗೆದುಹಾಕುವುದಕ್ಕೆ ನಿರ್ಧಾರ ಮಾಡಿರೋದಾಗಿ ಫಿಫಾ ಕೌನ್ಸಿಲ್ ಹೇಳಿದೆ..

-masthmagaa.com

Contact Us for Advertisement

Leave a Reply