ಫಿಫಾ ವಿಶ್ವಕಪ್‌ 2022: ಫೈನಲ್‌ ಪ್ರವೇಶಿಸಿದ ಫ್ರಾನ್ಸ್‌, ಫೈನಲ್‌ನಲ್ಲಿ ಫ್ರಾನ್ಸ್‌ Vs ಅರ್ಜಂಟೀನಾ

masthmagaa.com:

ಕತಾರ್‌ನಲ್ಲಿ ನಡಿತಾಯಿರೊ ಫಿಫಾ ವಿಶ್ವಕಪ್‌ನ ಕೊನೆಯ ಸೆಮಿ ಫೈನಲ್‌ ಮ್ಯಾಚ್‌ನಲ್ಲಿ ಫ್ರಾನ್ಸ್‌ ತಂಡ ಮೊರಕ್ಕೊ ತಂಡವನ್ನ 2-0 ಗೋಲುಗಳ ಅಂತರದಿಂದ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಫ್ರಾನ್ಸ್‌, ಭಾನುವಾರ ನಡೆಯಲಿರುವ ಐತಿಹಾಸಿಕ ಫೈನಲ್‌ ಮ್ಯಾಚ್‌ನಲ್ಲಿ ಮೆಸ್ಸಿ ಪಡೆಯನ್ನ ಎದುರಿಸಲಿದೆ. ಜೊತೆಗೆ ಬ್ರೆಜಿಲ್‌ ನಂತ್ರ ಸತತ ಎರಡನೇ ಬಾರಿಗೆ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ ಸಾಧನೆ ಕೂಡ ಮಾಡ್ತು. ಇನ್ನು ಸೆಮಿ ಫೈನಲ್‌ನ ಫಲಿತಾಂಶದ ನಂತರ ಮೊರಕ್ಕೊ ಹಾಗೂ ಫ್ರಾನ್ಸ್‌ ತಂಡದ ಅಭಿಮಾನಿಗಳ ನಡುವೆ ಘರ್ಷಣೆ ಉಂಟಾಗಿದೆ. ಫ್ರಾನ್ಸ್‌ನಲ್ಲಿ ಉಂಟಾದ ಕ್ಲ್ಯಾಶ್‌ನಲ್ಲಿ ಬಾಲಕನೊಬ್ಬ ಮೃತಪಟ್ಟಿದ್ದಾನೆ.) ಇನ್ನು ಅತ್ತ ಬೆಲ್ಜಿಯಂನ ಬ್ರುಸೆಲ್ಸ್‌ನಲ್ಲಿ ನೂರುಕ್ಕೂ ಹೆಚ್ಚು ಮೊರಕ್ಕೊ ಅಭಿಮಾನಿಗಳು ಪೋಲಿಸರೊಂದಿಗೆ ಕಾದಾಡಿದ್ದಾರೆ. ಪೋಲಿಸರ ಮೇಲೆ ಬೆಂಕಿ ಎರಚಿದ್ದು, ಕಸದ ಡಬ್ಬಿ, ಕಾರ್ಡ್‌ಬೋರ್ಡ್‌ಗಳಿಗೆ ಬೆಂಕಿ ಹಚ್ಚಿದ್ದಾರೆ.

-masthmagaa.com

Contact Us for Advertisement

Leave a Reply