ಮಯನ್ಮಾರ್ ಮಿಲಿಟರಿಗೆ ಅಮೆರಿಕ, ಇಂಗ್ಲೆಂಡ್ ಪೆಟ್ಟು!

masthmagaa.com:

ಮಯನ್ಮಾರ್​​ನಲ್ಲಿ ಮಿಲಿಟರಿ ಆಡಳಿತದ ಹಿಂಸಾಚಾರ ಮುಂದುವರಿದಿದೆ. ಪ್ರಜಾಪ್ರಭುತ್ವ ಪರ ಹೋರಾಟವನ್ನು ದಮನಿಸಲು ಏನೇನ್ ಬೇಕೋ ಎಲ್ಲವನ್ನೂ ಮಾಡ್ತಿದೆ ಮಿಲಿಟರಿ ಸರ್ಕಾರ.. ಈ ನಡುವೆ ಪ್ರಜಾಪ್ರಭುತ್ವ ಪರ ನಾಯಕಿ ಆಂಗ್ ಸನ್ ಸು ಕ್ಯೀ ಅವರ ಪಕ್ಷ ನ್ಯಾಷನಲ್ ಲೀಗ್ ಫಾರ್ ಡೆಮೋಕ್ರಸಿಯ ಮುಖ್ಯ ಕಚೇರಿ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ ನಡೆದಿದೆ. ಬೆಳಗ್ಗಿನ ಜಾವ ಕಚೇರಿಗೆ ಬೆಂಕಿ ತಗುಲಿರೋದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡ್ಲೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ನಡುವೆ ಅಮೆರಿಕ ಮತ್ತು ಇಂಗ್ಲೆಂಡ್,​​​ ಮಯನ್ಮಾರ್​​​ನ​ ಮಿಲಿಟರಿ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿದೆ. ಬ್ರಿಟನ್ ಮಯನ್ಮಾರ್ ಎಕನಾಮಿಕ್​ ಹೋಲ್ಡಿಂಗ್ಸ್ ಲಿಮಿಟೆಡ್ ಮೇಲೆ ನಿರ್ಬಂಧ ವಿಧಿಸಿದ್ರೆ, ಅಮೆರಿಕ ಮಯನ್ಮಾರ್ ಎಕನಾಮಿಕ್ ಕಾರ್ಪೊರೇಷನ್ ಲಿಮಿಟೆಡ್ ಮೇಲೆ ನಿರ್ಬಂಧ ವಿಧಿಸಿದೆ. ಈ ಕಂಪನಿಗಳು ಮಯನ್ಮಾರ್​ ಮಿಲಿಟರಿಗೆ ಆರ್ಥಿಕವಾಗಿ ಬ್ಯಾಕ್​ಬೋನ್ ರೀತಿ ಕೆಲಸ ಮಾಡುತ್ತಿದ್ವು.

-masthmagaa.com

Contact Us for Advertisement

Leave a Reply