ಕಾಬೂಲ್ ಏರ್​ಪೋರ್ಟ್​​​ನಲ್ಲಿ ಏನಾಗ್ತಿದೆ..? ಕಂಪ್ಲೀಟ್ ರಿಪೋರ್ಟ್​​

masthmagaa.com:

ಕಾಬೂಲ್ ಏರ್​ಪೋರ್ಟ್​​ನಲ್ಲಿ ಭಯಾನಕ ದೃಶ್ಯ ಮುಂದುವರಿದಿದೆ. ಅಮೆರಿಕ ಸೇನೆ ಆಗಸ್ಟ್​​ 14ರಿಂದ ಈವರೆಗೆ 25,100 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದೆ. ಜುಲೈ ಅಂತ್ಯದಿಂದ ಈವರೆಗೆ ಸುಮಾರು 30 ಸಾವಿರ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ ಅಂತ ಮಾಹಿತಿ ಸಿಕ್ಕಿದೆ. ಈ ನಡುವೆ ಅಮೆರಿಕ ಕಾಬೂಲ್​​ನಿಂದ ಬೇರೆ ದೇಶಗಳಿಗೆ ಸ್ಥಳಾಂತರಗೊಂಡಿರೋರನ್ನು ಕರೆತರಲು ವಿವಿಧ ಕಂಪನಿಗಳ 18 ನಾಗರಿಕ ವಿಮಾನಗಳನ್ನು ಬಳಸಲು ನಿರ್ಧರಿಸಿದೆ. ಆದ್ರೆ ಇವ್ಯಾವುದೂ ಕಾಬೂಲ್​ನಲ್ಲಿ ಲ್ಯಾಂಡ್​ ಆಗಲ್ಲ ಅಂತ ಪೆಂಟಗಾನ್ ಸ್ಪಷ್ಟಪಡಿಸಿದೆ. ಈ ನಡುವೆ ಕಾಬೂಲ್ ಏರ್​ಪೋರ್ಟ್​​ನಲ್ಲಿ ಅಪರಿಚಿತ ಬಂದೂಕುಧಾರಿಯೊಬ್ಬ ಫೈರಿಂಗ್ ಮಾಡಿದ್ದಾನೆ. ಇದ್ರಲ್ಲಿ ಓರ್ವ ಅಫ್ಘಾನಿಸ್ತಾನದ ಭದ್ರತಾ ಸಿಬ್ಬಂದಿ ಪ್ರಾಣ ಕಳ್ಕೊಂಡಿದ್ದಾರೆ ಅಂತ ಜರ್ಮನಿ ಸೇನೆ ತಿಳಿಸಿದೆ.

-masthmagaa.com

Contact Us for Advertisement

Leave a Reply