ವಿಡಿಯೋ: ಫ್ರಾನ್ಸ್​ನಿಂದ ಭಾರತಕ್ಕೆ ಹಾರಿದ ರಫೇಲ್ ಫೈಟರ್ ಜೆಟ್ಸ್

masthmagaa.com:

ಮೊದಲ ಹಂತದ ರಫೇಲ್ ಯುದ್ಧ ವಿಮಾನಗಳು ಇವತ್ತು ಫ್ರಾನ್ಸ್​ನಿಂದ ಭಾರತಕ್ಕೆ ಹಾರಾಟ ನಡೆಸಿವೆ. ಇವುಗಳು ಭಾರತಕ್ಕೆ ಬರುವ ಮುನ್ನ ಯುಎಇನಲ್ಲಿರುವ ಫ್ರಾನ್ಸ್‌ನ ವಾಯುನೆಲೆಯಲ್ಲಿ ಇಂಧನ ತುಂಬಿಸಿಕೊಳ್ಳಲಿವೆ. ನಂತರ ಭಾರತಕ್ಕೆ ಹಾರಾಟ ನಡೆಸಿ ಜುಲೈ 29ರಂದು ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಯನ್ನು ಸೇರಲಿವೆ.  ಫೈಟರ್ ಜೆಟ್​ಗಳು ಹೊರಡುವ ಮುನ್ನ ಫ್ರಾನ್ಸ್‌ನ ಭಾರತ ರಾಯಭಾರಿ ಪೈಲಟ್‌ಗಳೊಂದಿಗೆ ಸಮಾಲೋಚನೆ ‌ನಡೆಸಿದರು.

ಪೂರ್ವ ಲಡಾಖ್​ನ ವಾಸ್ತವ ಗಡಿ ರೇಖೆ ಬಳಿ ಭಾರತ-ಚೀನಾ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ಸಮಯದಲ್ಲೇ ರಫೇಲ್​ ಯುದ್ಧ ವಿಮಾನಗಳು ಭಾರತಕ್ಕೆ ಬರುತ್ತಿರುವುದು ಸಾಕಷ್ಟು ಮಹತ್ವ ಪಡೆದಿದೆ. ಇವುಗಳ ಸೇರ್ಪಡೆಯಿಂದ ಭಾರತೀಯ ವಾಯುಪಡೆಗೆ ಆನೆಬಲ ಬರಲಿದೆ ಅಂತಾನೇ ವಿಶ್ಲೇಷಿಸಲಾಗ್ತಿದೆ.

ಅಂದ್ಹಾಗೆ 2016ರಲ್ಲಿ 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಭಾರತವು ಫ್ರಾನ್ಸ್​ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದು ಬರೋಬ್ಬರಿ 59,000 ಕೋಟಿ ರೂಪಾಯಿಗಳ ಒಪ್ಪಂದವಾಗಿದೆ. ಒಪ್ಪಂದ ಏರ್ಪಟ್ಟ 4 ವರ್ಷಗಳ ಬಳಿಕ ಇದೀಗ ಮೊದಲ ಹಂತದಲ್ಲಿ 5 ಫೈಟರ್ ಜೆಟ್​​ಗಳು ಭಾರತಕ್ಕೆ ಬರುತ್ತಿವೆ. ಇವುಗಳನ್ನ ಅಂಬಾಲಾ ವಾಯುನೆಲೆಯ ಜೊತೆಗೆ ಲಡಾಖ್​ ಭಾಗದಲ್ಲೂ ನಿಯೋಜಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply