12 ಸಾವಿರ ವರ್ಷಗಳ ಹಿಂದೆ ಮನುಷ್ಯನ ಜೊತೆಗೆ ಬದುಕಿತ್ತು ನಾಯಿ!

masthmagaa.com:

ಅಮೆರಿಕದ ಕೋಸ್ಟಾ ರಿಕಾದಲ್ಲಿ ಪತ್ತೆಯಾದ ಮೂಳೆಯ ಅವಶೇಷವೊಂದರ ದವಡೆ ಭಾಗದ ಅಧ್ಯಯನದಿಂದ ಸೆಂಟ್ರಲ್ ಅಮೆರಿಕದಲ್ಲಿ 12 ಸಾವಿರ ವರ್ಷಗಳ ಹಿಂದೆಯೇ ಸಾಕು ನಾಯಿಗಳಿದ್ದವು ಅನ್ನೋ ವಿಚಾರವನ್ನು ಬಯಲು ಮಾಡಿದೆ. 1978ರಲ್ಲಿ ಕೋಸ್ಟಾರಿಕಾದಲ್ಲಿ ಈ ಅವಶೇಷ ಪತ್ತೆಯಾಗಿತ್ತು. ಇದಾದ ಬಳಿಕ 1990ರಲ್ಲಿ ಇದೇ ಜಾಗದಲ್ಲಿ ಉತ್ಖನನ ಶುರು ಮಾಡಲಾಯ್ತು. ಈ ವೇಳೆ ದೈತ್ಯ ಕುದುರೆ, ಈಕ್ವಸ್ ಎಸ್ಪಿ, ಗ್ಲಿಪ್ಟೋಡಾನ್​​​​, ಕೊಯೊಟೆ ಪತ್ತೆಯಾಗಿತ್ತು. ಆದ್ರೆ ನಾಯಿಯ ಮೂಳೆಗಳನ್ನು ಪರಿಶೀಲಿಸಿದಾಗ ಸುಮಾರು 12 ಸಾವಿರ ವರ್ಷಗಳ ಹಿಂದೆ ಮನುಷ್ಯರ ಜೊತೆಗೆ ವಾಸಿಸಿರೋದು ಗೊತ್ತಾಗಿದೆ ಅಂತ ತಜ್ಞರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply