ನಾನು ಚುನಾವಣೆಗೇ ನಿಲ್ಲಲ್ಲ ಅಂದಿದ್ಯಾಕೆ ಮೆಹಬೂಬಾ ಮುಫ್ತಿ?

masthmagaa.com:

ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಭೆ ಬೆನ್ನಲ್ಲೇ ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಇವತ್ತು ಎಲೆಕ್ಷನ್​​ಗೆ ಸ್ಪರ್ಧಿಸೋದಿಲ್ಲ ಅಂತ ಹೇಳಿದ್ದಾರೆ. ಚುನಾವಣೆಗೂ ಮುನ್ನ ಜನರ ಚೂರು ಚೂರಾಗಿರೋ ಆತ್ಮವಿಶ್ವಾಸವನ್ನು ಪುನರ್ ಸ್ಥಾಪಿಸಬೇಕು. 370ನೇ ವಿಧಿಯನ್ನು ಮರು ಸ್ಥಾಪಿಸಬೇಕು. ಅಲ್ಲಿಯವರೆಗೆ ನಾನು ಚುನಾವಣೆಗೆ ನಿಲ್ಲೋದಿಲ್ಲ. ನನ್ನ ಪಕ್ಷ ವಿನ್ ಆದ್ರೂ ಕೂಡ ಸಿಎಂ ಆಗೋದಿಲ್ಲ ಅಂತ ಹೇಳಿದ್ಧಾರೆ. ಅಂದ್ರೆ ಇವರು ಮಾತ್ರ ಸ್ಪರ್ಧಿಸಲ್ಲ.. ಇವರ ಪಕ್ಷ ಸ್ಪರ್ಧಿಸಲ್ಲ ಅಂತಾಯ್ತು. ಈ ಮೂಲಕ ಮೆಹಬೂಬಾ ಮುಫ್ತಿ ಬ್ಯಾಲೆನ್ಸಿಂಗ್ ಗೇಮ್ ಆಡ್ತಿದ್ದಾರೆ. ಯಾಕಂದ್ರೆ ಇವರಿಗೆ ದಕ್ಷಿಣ ಕಾಶ್ಮೀರದಲ್ಲಿರೋ ಕೆಲ ಮೂಲಭೂತವಾದಿಗಳ ಬೆಂಬಲ ಇದೆ. ಒಂದ್ವೇಳೆ ಈಗ ವಿರೋಧ ವ್ಯಕ್ತಪಡಿಸದೇ ಇದ್ರೆ ಮೂಲಭೂತವಾದಿಗಳ ಬೆಂಬಲ ಕಳೆದುಕೊಳ್ಳೋ ಭಯ ಅವರನ್ನ ಕಾಡ್ತಿದೆ. ಇನ್ನು ಇತ್ತೀಚೆಗೆ ನಡೆದ ರಾಷ್ಟ್ರಮಂಚ್ ಸಭೆ ಬಗ್ಗೆ ಎನ್​ಸಿಪಿ ನಾಯಕ ಶರದ್ ಪವಾರ್ ಮಾತನಾಡಿದ್ದು, ನಾವೇನು ತೃತೀಯ ರಂಗದ ಬಗ್ಗೆ ಚರ್ಚಿಸಿಲ್ಲ. ಹಾಗೇನಾದ್ರೂ ಮಾಡಿದ್ರೂ ಕಾಂಗ್ರೆಸ್ ಸೇರಿಸ್ಕೊಂಡೇ ಮಾಡ್ತೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply