ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ರೊಬೋಟಿಕ್‌ ಕಿಡ್ನಿ ಟ್ರಾನ್ಸ್‌ಪ್ಲಾಂಟ್‌! ದೇಶದಲ್ಲೇ ಪ್ರಥಮ ಬಾರಿಗೆ!

masthmagaa.com:

ದೇಶದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆ ಒಂದ್ರಲ್ಲಿ ಯಶಸ್ವಿಯಾಗಿ ರೊಬೋಟಿಕ್‌ ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ ಮಾಡಲಾಗಿದೆ. ದಿಲ್ಲಿ ಸಫ್ದಾರ್‌ಜಂಗ್‌ ಹಾಸ್ಪಿಟಲ್‌ ಅಂಡ್‌ ವರ್ಧಮಾನ್‌ ಮಹಾವೀರ ಮೆಡಿಕಲ್‌ ಕಾಲೇಜ್‌ನಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ. ಈ ರೊಬೊಟಿಕ್‌ ಟ್ರಾನ್ಸ್‌ಪ್ಲಾಂಟ್‌ ಅಂದ್ರೆ, ಆಪರೇಶನ್‌ ಅನ್ನ ರೋಬೋಟಿಕ್‌ ಆರ್ಮ್‌ ಅಥವಾ ಕೈ ಮೂಲಕವೇ ಮಾಡಿಸಲಾಗುತ್ತೆ. ಈ ರೊಬೊಟ್‌ನ್ನ ಡಾಕ್ಟರ್‌ ಕಂಟ್ರೋಲ್‌ ಮಾಡ್ತಿರ್ತಾರೆ. ಈ ಶಸ್ತ್ರಚಿಕಿತ್ಸೆ ಮಾಡೋ ವೈದ್ಯರು ರೋಬೋಟಿಕ್ಸ್‌ ಹಾಗೂ ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ ಎರಡರಲ್ಲೂ ಎಕ್ಸಪರ್ಟ್‌ ಆಗಿರ್ಬೇಕು. ಇತಿಹಾಸದಲ್ಲೇ ಇದೊಂದು ಮೈಲಿಗಲ್ಲು ಅಂತ ಸರ್ಜರಿ ಮಾಡಿದ ಡಾಕ್ಟರ್ ಅನೂಪ್‌ ಹೇಳಿದ್ದಾರೆ. ಅಂದ್ಹಾಗೆ ಉತ್ತರ ಪ್ರದೇಶದ ಫರುಕ್ಕಾಬಾದ್‌ನ 39 ವರ್ಷದ ವ್ಯಕ್ತಿಗೆ ಈ ಸರ್ಜರಿ ಮಾಡಲಾಗಿದೆ. ರೋಗಿಯ ಹೆಂಡತಿಯೇ ಕಿಡ್ನಿಯನ್ನ ದಾನ ಮಾಡಿದ್ದಾಳೆ. ಇವ್ರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯೋಕೆ ಹಣ ಇರಲಿಲ್ಲ. ಆದ್ದರಿಂದ ಕಳೆದ 5 ವರ್ಷಗಳಿಂದ ಕಾಯ್ತಿದ್ರು. ಇದೀಗ ಸರ್ಕಾರಿ ಆಸ್ಪತ್ರೆಯಲ್ಲೇ ಇವರ ಚಿಕೆತ್ಸೆ ಯಶಸ್ವಿಯಾಗಿ ನೆರವೇರಿದೆ.

-masthmagaa.com

Contact Us for Advertisement

Leave a Reply