VIDEO: ಕೊರೋನಾ ರೂಲ್ಸ್ ಬ್ರೇಕ್​! ಭಾರತದ 5 ಆಟಗಾರರಿಗೆ ಐಸೋಲೇಷನ್

masthmagaa.com:

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾದ 5 ಆಟಗಾರರು.. ರೋಹಿತ್ ಶರ್ಮಾ, ರಿಷಬ್ ಪಂತ್, ಶುಬ್​ಮನ್​ ಗಿಲ್​, ಪೃಥ್ವಿ ಶಾ ಮತ್ತು ನವದೀಪ್ ಸೈನಿ ಕೊರೋನಾ ನಿಯಮ ಉಲ್ಲಂಘಿಸಿದ ಹಿನ್ನೆಲೆ ಅವರನ್ನೀಗ ಐಸೋಲೇಷನ್​ಗೆ ಒಳಪಡಿಸಲಾಗಿದೆ. ಅಂದ್ರೆ ತಂಡದ ಉಳಿದ ಸದಸ್ಯರಿಂದ ಅವರನ್ನ ಪ್ರತ್ಯೇಕವಾಗಿ ಇಡಲಾಗಿದೆ. ಅಂದ್ಹಾಗೆ ಈ ಆಟಗಾರರು ಮೆಲ್ಬೊರ್ನ್​​ನ ರೆಸ್ಟೊರೆಂಟ್​ ಒಂದರಲ್ಲಿ ಒಟ್ಟಿಗೆ ಕೂತು ಊಟ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಕ್ರಿಕೆಟ್​ ಆಸ್ಟ್ರೇಲಿಯಾ ಗಮನಕ್ಕೂ ಬಂದಿದೆ. ಹೀಗಾಗಿ ಇದು ಕೊರೋನಾ ಪ್ರೋಟೋಕಾಲ್​​ನ ಉಲ್ಲಂಘನೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಉಳಿದ ಆಟಗಾರರ ಆರೋಗ್ಯದ ದೃಷ್ಟಿಯಿಂದ ಈ 5 ಆಟಗಾರರನ್ನ ಐಸೋಲೇಷನ್​ಗೆ ಒಳಪಡಿಸಲಾಗಿದೆ ಅಂತ ಕ್ರಿಕೆಟ್​ ಆಸ್ಟ್ರೇಲಿಯಾ ತಿಳಿಸಿದೆ. ಇದು ಕೊರೋನಾ ನಿಯಮದ ಉಲ್ಲಂಘನೆನಾ ಅಂತ ಬಿಸಿಸಿಐ ಕೂಡ ತನಿಖೆ ನಡೆಸುತ್ತಿದೆ. 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡೂ ತಂಡಗಳು 1-1 ಸಮಬಲ ಕಾಯ್ದುಕೊಂಡಿದ್ದು, ಜನವರಿ 7ರಿಂದ 3ನೇ ಟೆಸ್ಟ್ ಆರಂಭವಾಗಲಿದೆ. ಇಂತಹ ಟೈಮಲ್ಲೇ ಈ ಘಟನೆ ನಡೆದಿದೆ. ಒಂದ್ವೇಳೆ ಇದು ರೂಲ್ಸ್ ಬ್ರೇಕ್ ಅಂತ ಕ್ರಿಕೆಟ್ ಆಸ್ಟ್ರೇಲಿಯಾ ಏನಾದ್ರೂ ಐವರು ಆಟಗಾರರನ್ನ 14 ದಿನಗಳ ಕ್ವಾರಂಟೈನ್​ಗೆ ಒಳಪಡಿಸಿದ್ರೆ 3ನೇ ಟೆಸ್ಟ್​ಗೆ ಇವರೆಲ್ಲರೂ ಅಲಭ್ಯರಾಗಲಿದ್ದಾರೆ.

-masthmagaa.com

Contact Us for Advertisement

Leave a Reply