ಜಮ್ಮು-ಕಾಶ್ಮೀರ: ರಾತ್ರೋರಾತ್ರಿ ನಡೆದ ಎನ್ಕೌಂಟರ್‌ನಲ್ಲಿ 5 ಭಯೋತ್ಪಾದಕರು ಬಲಿ

masthmagaa.com:

ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ನಿನ್ನೆಯಿಂದ ಸೇನೆ ನಡೆಸುತ್ತಿರೋ ಕಾರ್ಯಾಚರಣೆಯಲ್ಲಿ 5 ಜನ ಭಯೋತ್ಪಾದಕರನ್ನ ಹೊಡೆದುರುಳಿಸಲಾಗಿದೆ. ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಐವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಮತೃ ಉಗ್ರರನ್ನ ಪಾಕ್‌ ಮೂಲದ ಉಗ್ರ ಸಂಘಟನೆ LeT ಗುಂಪಿಗೆ ಸೇರಿದ್ರು ಅಂತ ಹೇಳಲಾಗಿದೆ. ಇನ್ನು ಜಮ್ಮು ಕಾಶ್ಮೀರ ಪೊಲೀಸ್‌ ಮತ್ತು CRP ಈ ಜಂಟಿ ಶೋಧಾ ಕಾರ್ಯಾಚರಣೆ ನಡೆಸಿದ್ದು, ಭಯೋತ್ಪಾದಕರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನ ವಶ ಪಡಿಸಿಕೊಳ್ಳಲಾಗಿದೆ. ಅಂದ್ಹಾಗೆ ಭಯೋತ್ಪಾದಕರು ಕುಲ್ಗಾಮ್‌ನಲ್ಲಿ ಇದ್ದಾರೆ ಅನ್ನೋ ಖಚಿತ ಗುಪ್ತಚರ ಮಾಹಿತಿ ಆಧಾರದ ಮೇಲೆ ಈ ಕಾರ್ಯಚರಣೆ ನಡೆಸಲಾಗಿದೆ. ಈ ವೇಳೆ ಭಯೋತ್ಪಾದಕರು ಹಾಗೂ ರಕ್ಷಣಾ ಪಡೆಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದ್ದು, ಉಗ್ರರನ್ನ ಹೊಡೆದು ಹಾಕಲಾಗಿದೆ.

-masthmagaa.com

Contact Us for Advertisement

Leave a Reply