ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ವರದಿಗೆ ತಿರುಗೇಟು ನೀಡಿದ ಭಾರತ ಹೇಳಿದ್ದೇನು?

masthmagaa.com:

ಭಾರತದ ಧಾರ್ಮಿಕ ಸ್ವಾತಂತ್ರ್ಯ ಕುರಿತು ಅಮೆರಿಕ ರಿಲೀಸ್‌ ಮಾಡಿರೊ ವರದಿಯನ್ನ ಭಾರತ ತಳ್ಳಿಹಾಕಿದ್ದು ಅಮೆರಿಕಗೆ ಮಂಗಳಾರತಿ ಮಾಡಿದೆ . ಅಮೆರಿಕದ ನೀಡಿರೋ ವರದಿ ಪಕ್ಷಪಾತವಾಗಿದೆ. ಇಂಥ ವರದಿಗಳನ್ನ ತಪ್ಪು ತಿಳುವಳಿಕೆ ಹಾಗೂ ತಪ್ಪು ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತೆ ಅಂತ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂಧಮ್‌ ಬಗ್ಚಿ ಹೇಳಿದ್ದಾರೆ. ಅಂದ್ಹಾಗೆ
ಭಾರತದ ವಿವಿಧ ರಾಜ್ಯಗಳಲ್ಲಿ ವರ್ಷವಿಡೀ ಹತ್ಯೆಗಳು, ಹಲ್ಲೆಗಳು ಮತ್ತು ಬೆದರಿಕೆ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದಾಳಿಗಳು ಹೆಚ್ಚಾಗಿವೆ ಅಂತ ಅಮೆರಿಕ ತನ್ನ ವರದಿಯಲ್ಲಿ ಹೇಳಿತ್ತು. ಈಗ ಭಾರತ ಅದಕ್ಕೆ ತಿರುಗೇಟು ಕೊಟ್ಟಿದೆ.

-masthmagaa.com

Contact Us for Advertisement

Leave a Reply