ವಿಮಾನಕ್ಕೇ ಚಮಕ್ ಕೊಟ್ಟ ದುರ್ಗಾ ಮಂಟಪ! ಇದ್ಯಾವ ಥರ ಪೆಂಡಾಲ್ ಮಾರ್ರೆ!

masthmagaa.com:

ಪಶ್ಚಿಮ ಬಂಗಾಳದಲ್ಲಿ ವಿಚಿತ್ರ ಘಟನೆಯಾಗಿದೆ. ಇಲ್ಲಿನ ಡುಮ್ಡುಮ್ ನಲ್ಲಿರೋ ಶ್ರೀಭೂಮಿ ದುರ್ಗಾ ಪೂಜಾ ಪೆಂಡಾಲ್ ನವರು ಹಾಕಿರೋ ಲೈಟಿಂಗ್ ಜಗಮಗ ಅಂತಿದೆ. ಯಾವ ಮಟ್ಟಿಗೆ ಜಗಮಗ ಅಂತಿದೆ ಅಂದ್ರೆ ಆಕಾಶದಲ್ಲಿ ಹಾರೋ ವಿಮಾನಗಳಿಗೂ ಡಿಸ್ಟರ್ಬ್ ಮಾಡುವಷ್ಟು. ಈ ಬಗ್ಗೆ 3 ಪ್ರತ್ಯೇಕ ಫ್ಲೈಟ್ ಗಳ ಪೈಲಟ್ಗಳು ಕೋಲ್ಕತ್ತಾ ATCಗೆ ಕಂಪ್ಲೇಂಟ್ ನೀಡಿದ್ದಾರೆ. ಕೋಲ್ಕತ್ತಾ ಏರ್ಪೋರ್ಟ್ ಅಥಾರಿಟಿಗೂ ದೂರು ತಲುಪಿದೆ. ಅಂದ್ಹಾಗೆ ಈ ಪೆಂಡಾಲ್ ಅನ್ನ ಬುರ್ಜ್ ಖಲೀಫಾ ಮಾದರಿಯಲ್ಲಿ ದೊಡ್ಡದಾಗಿ ನಿರ್ಮಿಸಲಾಗಿದೆ. ಇದಕ್ಕೆ ಹಾಕಿರೋ ಲೈಟ್ಸ್​ ಅಸಲಿ ಬುರ್ಜ್​ ಖಲೀಫಾವನ್ನೇ ಮೀರಿಸುವಂತಿದೆ. ಇದೇ ಈಗ ವಿಮಾನದ ಪೈಲಟ್​​ಗಳಿಗೆ ಕಿರಿಕಿರಿ ಉಂಟು ಮಾಡ್ತಿದೆ.

-masthmagaa.com

Contact Us for Advertisement

Leave a Reply