ಒಳ ಉಡುಪನ್ನೇ ಮಾಸ್ಕ್ ಮಾಡ್ಕೊಂಡು ಬಂದ ಭೂಪ!

masthmagaa.com:

ವಿಮಾನಗಳಲ್ಲಿ ಮಾಸ್ಕ್ ಹಾಕಲೇ ಬೇಕು ಅನ್ನೋ ರೂಲ್ಸ್ ಇದೆ. ಅದನ್ನು ವಿರೋಧಿಸಲು ವ್ಯಕ್ತಿಯೊಬ್ಬ ಮಹಿಳೆಯರ ಒಳ ಉಡುಪನ್ನು ಮಾಸ್ಕ್ ರೀತಿ ಹಾಕ್ಕೊಂಡು ಬಂದಿದ್ದಾನೆ. ಅಮೆರಿಕದ ಫ್ಲೋರಿಡಾದ ಮಿಯಾಮಿಯಲ್ಲಿ ಫೋರ್ಟ್​ ಲೌಡರ್​ಡೇಲ್​​​​ ವಿಮಾನ ನಿಲ್ದಾಣದಲ್ಲಿ ಈ ಘಟನೆ ವರದಿಯಾಗಿದೆ. ಈ ರೀತಿ ತಲೆಹರಟೆ ಮಾಡಿದ ವ್ಯಕ್ತಿಯನ್ನು 38 ವರ್ಷದ ಆಡಂ ಜೆನ್ನೆ ಅಂತ ಗುರುತಿಸಲಾಗಿದೆ. ವಿಮಾನದಲ್ಲಿ ಆಹಾರ ಸೇವಿಸಲು, ಕುಡಿಯೋಕೆ ಅವಕಾಶ ನೀಡಲಾಗಿದೆ. ಆಗ ಮಾಸ್ಕ್ ಕೂಡ ತೆಗೆಯಬಹುದು. ಹೀಗಿರುವಾಗ ಮಾಸ್ಕ್ ಕಡ್ಡಾಯ ಯಾಕೆ ಮಾಡ್ಬೇಕು ಅನ್ನೋದು ಆ ವ್ಯಕ್ತಿಯ ಪ್ರಶ್ನೆಯಾಗಿದೆ. ವಿಮಾನ ಟೇಕಾಫ್ ಆಗೋ ಮುನ್ನವೇ ಕೆಳಗಿಳಿಯುವಂತೆ ಸೂಚಿಸಲಾಗಿದೆ. ಸ್ವಲ್ಪ ಅದು ಇದು ಅಂತ ಚರ್ಚೆ ಮಾಡಿದ ಬಳಿಕ ಆ ವ್ಯಕ್ತಿ ವಿಮಾನದಿಂದ ಕೆಳಗಿಳಿದಿದ್ದಾನೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಆತ, ನಾನು ಈ ಹಿಂದೆಯೂ ಹಂಗೇ ಮಾಡಿದ್ದೀನಿ. ಯಾಕಂದ್ರೆ ಇದೂ ಕೂಡ ಮಾಸ್ಕ್ ಕೆಲಸ ಮಾಡುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply