4 ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಮೊತ್ತದ ಆಸ್ತಿ ಖಾಸಗೀಕರಣ!

masthmagaa.com:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವತ್ತು ನ್ಯಾಷನಲ್ ಮಾನೆಟೈಸೇಷನ್​​​ ಪೈಪ್​ಲೈನ್​ ಅಂದ್ರೆ ರಾಷ್ಟ್ರೀಯ ಖಾಸಗೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. 4 ವರ್ಷಗಳ ಯೋಜನೆ ಇದಾಗಿದ್ದು, ಸಾಧ್ಯವಾದಷ್ಟು ವಿದೇಶಿ ಬಂಡವಾಳವನ್ನು ಸೆಳೆಯೋ ಉದ್ದೇಶ ಹೊಂದಲಾಗಿದೆ. ಜೊತೆಗೆ ಈ ಮೂಲಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬದಲಿ ಸಂಪನ್ಮೂಲ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಪ್ಲಾನ್ ಹಾಕ್ಕೊಂಡಿದೆ. ಈ ಕಾರ್ಯಕ್ರಮದ ಮೂಲಕ ದೇಶದ ಮೂಲಭೂತ ಸೌಕರ್ಯಗಳು, ರಾಷ್ಟ್ರೀಯ ಹೆದ್ದಾರಿಗಳು, ಮೊಬೈಲ್ ಟವರ್​​ಗಳು, ಸ್ಟೇಡಿಯಂಗಳು, ರೈಲ್ವೇ ಸ್ಟೇಷನ್​, ಪವರ್ ಗ್ರಿಡ್ ಸೇರಿದಂತೆ ಒಟ್ಟು 6 ಲಕ್ಷ ಕೋಟಿ ರೂ ಗುರಿ ಹೊಂದಲಾಗಿದೆ. ಆದ್ರೆ ಇವೆಲ್ಲವನ್ನು ಖಾಸಗೀಕರಣಗೊಳಿಸಲಾಗುತ್ತೆ ಅಂದ್ರೆ ಫುಲ್ ಮಾರಾಟ ಮಾಡಲಾಗುತ್ತೆ ಅಂತ ಅರ್ಥವಲ್ಲ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಪ್ರಯತ್ನವಷ್ಟೆ.. ಮಾಲೀಕತ್ವ ಸರ್ಕಾರದ ಬಳಿಯಲ್ಲೇ ಇರಲಿದೆ ಅಂತ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply