ದುಡ್ಡಿನಾಸೆಗೆ ಬಿತ್ತು ಫೋಲ್ಕ್ ಸಿಂಗರ್ ಹೆಣ..!

ಫೋಲ್ಕ್ ಸಿಂಗರ್ ಸುಷ್ಮಾ ನೆಕ್ಪುರ್ ಹತ್ಯೆ ಸಂಬಂಧ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆಕೆಯ ಪ್ರಿಯಕರ ಗಜೇಂದ್ರ ಭಾಟಿ ಆತನ ಕಾರ್ ಡ್ರೈವರ್, ಸ್ನೇಹಿತರನ್ನು ಬಂಧಿಸಲಾಗಿದೆ. ಜೊತೆಗೆ ಬಂಧಿತರಲ್ಲಿ ಇಬ್ಬರು ಶಾರ್ಪ್ ಶೂಟರ್‍ಗಳೂ ಸೇರಿದ್ದಾರೆ.

ಅಕ್ಟೋಬರ್ 1ರಂದು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಬಳಿ ಸುಷ್ಮಾ ಅವರನ್ನು ಹತ್ಯೆಗೈಯ್ಯಲಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಶಾರ್ಪ್ ಶೂಟರ್‍ಗಳನ್ನು ಅರೆಸ್ಟ್ ಮಾಡಿದ್ದರು. ಸುಷ್ಮಾ ಪ್ರಿಯಕರನೇ ಹತ್ಯೆಗೆ ಸುಪಾರಿಗೆ ಕೊಟ್ಟಿದ್ದು ಅಂತ ಅವರಿಂದಲೇ ತಿಳಿದುಬಂದಿತ್ತು. ನಂತರ ಪೊಲೀಸರು ಸುಷ್ಮಾ ಪ್ರಿಯಕರ ಗಜೇಂದ್ರ ಭಾಟಿ, ಡ್ರೈವರ್ ಅಮಿತ್, ಸ್ನೇಹಿತರಾದ ಪ್ರಮೋದ್ ಕಸನ ಮತ್ತು ಅಜಬ್ ಸಿಂಗ್ ಸೇರಿ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ. ಶಾರ್ಪ್ ಶೂಟರ್‍ಗಳನ್ನು ಸಂದೀಪ್ ಮತ್ತು ಸುಖೇಶ್ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಷ್ಮಾ ಪ್ರಿಯಕರ ಗಜೇಂದ್ರ, ನನ್ನ ಮತ್ತು ಸುಷ್ಮಾ ನಡುವಿನ ಸಂಬಂಧ ಹಾಳಾಗಿತ್ತು. ನನ್ನ ಆಸ್ತಿಯನ್ನು ಆಕೆ ಮತ್ತು ಆಕೆಯ ಮಗುವಿನ ಹೆಸರಿಗೆ ಮಾಡುವಂತೆ ಒತ್ತಾಯಿಸುತ್ತಿದ್ದಳು. ಇದೇ ಕಾರಣಕ್ಕೆ ಕೊಲೆಗೆ ಸುಪಾರಿ ನೀಡಿರೋದಾಗಿ ಗಜೇಂದ್ರ ತಿಳಿಸಿದ್ದಾನೆ.

Contact Us for Advertisement

Leave a Reply