ಬುಲ್ಲಿ ಬಾಯ್ ವಿವಾದ: ಬೆಂಗಳೂರು ಯುವಕ ಅರೆಸ್ಟ್​! ಮಹಿಳೆ ವಶಕ್ಕೆ

masthmagaa.com:

ಇತ್ತೀಚೆಗೆ ಸದ್ದು ಮಾಡಿದ್ದ ಬುಲ್ಲಿಬಾಯ್ ಪ್ರಕರಣ ಸಂಬಂಧ ಬೆಂಗಳೂರು ಮೂಲದ ಇಂಜಿನಿಯರ್ 21 ವರ್ಷದ ವಿಶಾಲ್ ಕುಮಾರ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಯನ್ನು ಮುಂಬೈನ ಬಾಂದ್ರಾ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್​ ಆತನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಇದೇ ಪ್ರಕರಣ ಸಂಬಂಧ ಉತ್ತರಾಖಂಡ್​​​​ನಲ್ಲಿ ಮಹಿಳೆಯೊಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಆಕೆಯೇ ಇದಕ್ಕೆಲ್ಲಾ ಸೂತ್ರಧಾರಿ ಅಂತ ಗೊತ್ತಾಗಿದೆ. ವಿಶಾಲ್ ಮತ್ತು ಮಹಿಳೆಗೆ ಮೊದಲಿಂದಲೂ ಪರಿಚಯವಿದ್ದು, ಇಬ್ಬರನ್ನೂ ವಿಚಾರಣೆ ನಡೆಸಲಾಗ್ತಿದೆ. ಮಹಿಳೆ ಬುಲ್ಲಿಬಾಯ್​​ಗೆ ಸಂಬಂಧಿಸಿದಂತೆ ಮೂರ್ಮೂರು ಖಾತೆಗಳನ್ನು ಹೊಂದಿದ್ರು. ಅದೇ ರಿತಿ ವಿಶಾಲ್ ಕುಮಾರ್ ಸಿಖ್ ಸಂಘಟನೆಗಳ ಹೆಸರಲ್ಲಿ ನಕಲಿ ಖಾತೆಗಳನ್ನು ಓಪನ್ ಮಾಡ್ಕೊಂಡಿದ್ದ ಅಂತ ಗೊತ್ತಾಗಿದೆ. ಅಂದಹಾಗೆ ಬುಲ್ಲಿಬಾಯ್ ಅನ್ನೋ ಆಪ್​​ನಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಹಾಕಿ, ಅದ್ರಲ್ಲಿ ಕೆಳಗೆ ಪ್ರೈಸ್​ ಟ್ಯಾಗ್ ಕೂಡ ಹಾಕಲಾಗಿತ್ತು. ಇದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮತ್ತು ವಿಪಕ್ಷಗಳಿಂದ ಭಾರಿ ಟೀಕೆಗೆ ಗುರಿಯಾಗಿತ್ತು.

-masthmagaa.com

Contact Us for Advertisement

Leave a Reply