ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಡ್ರಗ್ಸ್‌ ತಗೋತಾರೆ ಎಂದು ಆರೋಪಿಸಿದ ಟ್ರಂಪ್‌!

masthmagaa.com:

ಅಮೆರಿಕದ ವೈಟ್‌ಹೌಸ್‌ನಲ್ಲಿ ವೈಟ್‌ ಪೌಡರ್ ಪತ್ತೆಯಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಟ್‌ ಟ್ರಂಪ್‌, ಅಧ್ಯಕ್ಷ ಜೋ ಬೈಡನ್‌ ಅವ್ರ ಮೇಲೆ ಮುಗಿಬಿದ್ದಿದ್ದಾರೆ. ವೈಟ್‌ಹೌಸ್‌ನ ವೆಸ್ಟ್‌ವಿಂಗ್‌ನಲ್ಲಿ ಸಿಕ್ಕಿರೋ ನಶಾ ವಸ್ತು ಹಂಟರ್‌ ಬೈಡನ್‌ ಬಿಟ್ಟು ಬೇರೆ ಯಾರಾದ್ರು ಯೂಸ್‌ ಮಾಡಿದ್ರು ಅಂದ್ರೆ ನಂಬೋಕೆ ಆಗುತ್ತಾ ಅಂತ ಟ್ರಂಪ್‌ ವಾಗ್ದಾಳಿ ನಡೆಸಿದ್ದಾರೆ. ಬೈಡನ್‌ರನ್ನ ಹಂಟರ್‌ ಅಂತ ಕರೆದಿರೋ ಟ್ರಂಪ್‌ ಅವ್ರೇ ನಶಾ ವಸ್ತುವನ್ನ ಬಳಸಿರೋದು ಅಂತ ಆರೋಪಿಸಿದ್ದಾರೆ. ಜೊತೆಗೆ ವೌಟ್‌ಹೌಸ್‌ನಲ್ಲಿ ಸಿಕ್ಕಿರೋದು ನಿಜವಾಗ್ಲೂ ವೈಟ್‌ ಪೌಡರ್‌ ಅಲ್ಲಾ ಅಥವಾ ಸಿಕ್ಕಿದ್ದು ಕೇವಲ ಸ್ವಲ್ಪ ಮಾತ್ರ ಅಂತ ಫೇಕ್‌ ನ್ಯೂಸ್‌ ಮೀಡಿಯಾಗಳೆಲ್ಲಾ ಅಂದ್ರೆ ಬೈಡನ್‌ ಪರ ಮೀಡಿಯಾಗಳು ಹೇಳೋಕೆ ಶುರು ಮಾಡ್ತವೆ ನೋಡಿ ಅಂತ ಟ್ರಂಪ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಷ್ಟೆ ಅಲ್ದೆ ಈ ವಿಚಾರವನ್ನ ಅಲ್ಲಿಗೇ ಮುಗಿಸಿ ಬಿಡ್ತಾರೆ ಅಂತ ಟ್ರಂಪ್‌ ಆಕ್ರೋಶ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply