ಮೇಕೆದಾಟು ಯೋಜನೆಗೆ ಕೇಂದ್ರದಿಂದ ಗ್ರೀನ್​ ಸಿಗ್ನಲ್​? ಕೇಂದ್ರ ಸಚಿವರ ಮುನ್ಸೂಚನೆ

masthmagaa.com:

ಮೇಕೆದಾಟು ಯೋಜನೆಗೆ ಪಕ್ಕದ ತಮಿಳುನಾಡು ಖ್ಯಾತೆ ತೆಗೆಯುತ್ತಿರೋ ಟೈಮಲ್ಲೇ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಇವತ್ತು ರಾಜ್ಯಕ್ಕೆ ಆಗಮಿಸಿದ್ರು. ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಮತ್ತು ಇತರ ಸಚಿವರ ಜೊತೆ ಜಲ್ ಜೀವನ್ ಮಿಷನ್​ ಸಂಬಂಧ ಸಭೆ ನಡೆಸಿದ್ರು. ಬಳಿಕ ಮಾತನಾಡಿದ ಅವರು, ಮೇಕೆದಾಟು ಯೋಜನೆ ಸೇರಿದಂತೆ ಬಾಕಿ ಉಳಿದಿರೋ ನೀರಾವರಿ ಯೋಜನೆಗಳ ಬಗ್ಗೆ ಗಮನಹರಿಸೋದಾಗಿ ಸಿಎಂ ಯಡಿಯೂರಪ್ಪಗೆ ಮತ್ತೆ ಭರವಸೆ ನೀಡಿದ್ದೇನೆ. ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡೋದಾಗಿಯೂ ಹೇಳಿದ್ದೀನಿ ಅಂತ ಹೇಳಿದ್ದಾರೆ. ಬಳಿಕ ಸಿಎಂ ಯಡಿಯೂರಪ್ಪ ಕೂಡ ಮಾತನಾಡಿ, ಕೃಷ್ಣಾ ಯೋಜನೆಗೆ ನೊಟಿಫಿಕೇಶನ್ ಹೊರಡಿಸುವುದು, ಭದ್ರಾ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ಯೋಜನೆ ಅಂತ ಪರಿಗಣಿಸೋದು, ಕಳಸಾ-ಬಂಡೂರಿ ಯೋಜನೆಗೆ ಕೇಂದ್ರದ ಕ್ಲಿಯರೆನ್ಸ್ ನೀಡೋದು ಮತ್ತು ಎತ್ತಿನ ಹೊಳೆ ಯೋಜನೆಗಳ ಕುರಿತು ಚರ್ಚೆ ಮಾಡಲಾಗಿದೆ ಅಂತ ತಿಳಿಸಿದರು.

-masthmagaa.com

Contact Us for Advertisement

Leave a Reply