ಆಫ್ರಿಕಾ ರಾಷ್ಟ್ರಗಳಿಗೆ ತನ್ನ ಸೇನಾ ಪಡೆ ಕಳುಹಿಸಿದ ಭಾರತ!

masthmagaa.com:

ಮಿಲಿಟರಿ ಡಿಪ್ಲೊಮೆಸಿ ಹೆಚ್ಚಿಸೋಕೆ ಭಾರತ ಈಗ ಆಫ್ರಿಕಾ ರಾಷ್ಟ್ರಗಳು, ಅರ್ಮೇನಿಯಾ ಮತ್ತು ಫಿಲಿಪೈನ್ಸ್‌ ಮೇಲೆ ಫೋಕಸ್‌ ಮಾಡಿದೆ. ಈ ರಾಷ್ಟ್ರಗಳ ಪ್ರಮುಖ ಪ್ರದೇಶಗಳಿಗೆ ತನ್ನ ಸೇನಾ ಪಡೆಗಳನ್ನ ಕಳಿಸಿದೆ. ಇದೇ ಮೊದಲ ಬಾರಿಗೆ ಆಫ್ರಿಕಾದ ದೇಶಗಳಾದ ಮೊಜಾಂಬಿಕ್‌ ಮತ್ತು ಐವರಿ ಕೋಸ್ಟ್‌ ಹಾಗೂ ಫಿಲಿಪೈನ್ಸ್‌ಗೆ ಭಾರತ ಸೇನೆಯನ್ನ ನಿಯೋಜಿಸಿದೆ. ಹೀಗಂತ ಕೆಲ ಮೂಲಗಳು ಮಾಹಿತಿ ನೀಡಿವೆ. ಅಲ್ದೆ ಈ ಹೊಸ ನೀತಿಯ ಭಾಗವಾಗಿ ಪೋಲ್ಯಾಂಡ್‌, ಇಥಿಯೋಪಿಯಾ ಮತ್ತು ಅರ್ಮೇನಿಯಾಗೂ ತನ್ನ ಸೇನಾ ಪಡೆಯನ್ನ ಭಾರತ ಕಳಿಸಲಿದೆ ಅಂತ ಹೇಳಲಾಗ್ತಿದೆ. ಜಾಗತಿಕವಾಗಿ ಪ್ರಭಾವ ವೃದ್ದಿಸಿಕೊಳ್ಳೋಕೆ ಮತ್ತು ಈ ದೇಶಗಳೊಂದಿಗೆ ಸೇನಾ ಸಹಕಾರವನ್ನ ಹೆಚ್ಚಿಸೋಕೆ ಭಾರತ ಈ ಕ್ರಮ ತಗೋತಾ ಇದೆ ಅಂತ ಹೇಳಲಾಗ್ತಿದೆ. ಆದ್ರೆ ಸರ್ಕಾರದಿಂದ ಇದುವರೆಗೂ ಈ ಕುರಿತು ಅಧಿಕೃತ ಮಾಹಿತಿ ಸಿಕ್ಕಿಲ್ಲ. ಅಧಿಕಾರಿಗಳ ಮೂಲಗಳಷ್ಟೇ ಮಾಹಿತಿ ಹಂಚಿಕೊಂಡಿವೆ.

-masthmagaa.com

Contact Us for Advertisement

Leave a Reply