ಪಾಕ್​​ನಲ್ಲಿ ಹಿಂದೂ ಯುವತಿಯರ ಪಾಡು ಇದೇ ನೋಡಿ..

masthmagaa.com:

ಪಾಕಿಸ್ತಾನದಲ್ಲಿ ಬಲವಂತದ ಮದುವೆಯಾಗಿ, ಹಿಂಸೆ ಅನುಭವಿಸುತ್ತಿದ್ದ ಹಿಂದು ಯುವತಿಯನ್ನು ಪೊಲೀಸರು ರಕ್ಷಿಸಿ, ಪೋಷಕರಿಗೆ ಒಪ್ಪಿಸಿದ್ದಾರೆ. ಇತ್ತೀಚೆಗಷ್ಟೇ ಮಹಿಳೆ ಸಹಾಯ ಕೇಳಿಕೊಂಡು ಮಾಡಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರೀನಾ ಮೇಘ್ವಾರ್​​ ಅನ್ನೋ ಯುವತಿಯನ್ನು ಫೆಬ್ರವರಿ 13ರಂದು ಖಾಸಿಂ ಕಶ್ಕೇಲಿ ಎಂಬಾತ ಸಿಂಧ್ ಪ್ರಾಂತ್ಯದ ಬಡಿನ್ ಜಿಲ್ಲೆಯಿಂದ ಅಪಹರಿಸಿದ್ದ. ನಂತರ ಆಕೆ ಮುಸ್ಲಿಂ ಯುವತಿ ಎಂದು ಬಿಂಬಿಸಲು ಅಗತ್ಯವಾದ ದಾಖಲೆಗಳನ್ನು ಸೃಷ್ಟಿಸಿ, ಮದುವೆಯಾಗಿದ್ದ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದ ಯುವತಿ, ದಯವಿಟ್ಟು ನನ್ನನ್ನು ನನ್ನ ತಂದೆ-ತಾಯಿ ಬಳಿ ಕಳುಹಿಸಿಕೊಡಿ. ನನ್ನನ್ನು ಬಲವಂತವಾಗಿ ಕರೆದುಕೊಂಡು ಬರಲಾಗಿದೆ. ಒಂದು ವೇಳೆ ಈ ಬಗ್ಗೆ ಬಾಯಿಬಿಟ್ರೆ ನನ್ನ ತಂದೆ-ತಾಯಿ ಮತ್ತು ಸಹೋದರರನ್ನು ಕೊಲ್ಲೋದಾಗಿ ಎಚ್ಚರಿಸಲಾಗಿದೆ ಅಂತ ಹೇಳಿದ್ರು. ಆದ್ರೆ ಯಾರು ಅಪಹರಿಸಿದ್ದಾರೆ. ಏನ್ ಕಥೆ ಅಂತ ಯುವತಿ ಹೇಳಿರಲಿಲ್ಲ. ನಂತರ ಸಿಂಧ್ ಪ್ರಾಂತ್ಯದ ಸರ್ಕಾರ ಎಚ್ಚೆತ್ತು ಈ ಬಗ್ಗೆ ತನಿಖೆಗೆ ಸೂಚಿಸಿತು. ನಂತರ ಖಾಸಿಂ ಮನೆಯಲ್ಲಿದ್ದ ಯುವತಿಯನ್ನು ಪೊಲೀಸರು ರಕ್ಷಿಸಿ ಕೋರ್ಟ್​​ಗೆ ಹಾಜರುಪಡಿಸಿದ್ರು. ಅಲ್ಲಿ ಯುವತಿ, ಖಾಸಿಂ ನನ್ನನ್ನು ಮತಾಂತರ ಮಾಡಿಲ್ಲ. ಬದಲಾಗಿ ನಾನು ಮುಸ್ಲಿಂ ಅನ್ನೋದಕ್ಕೆ ಹಲವು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮದುವೆಯಾಗಿದ್ದಾನೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಸದ್ಯ ಕೋರ್ಟ್​​ ಆರೋಪಿ ಖಾಸಿಂ ವಿರುದ್ಧ ಕೇಸ್ ಹಾಕಿ, ತನಿಖೆ ನಡೆಸಿ ಅಂತ ಆದೇಶಿಸಿದೆ.

-masthmagaa.com

Contact Us for Advertisement

Leave a Reply