ಜಮ್ಮು ಕಾಶ್ಮೀರದ ಮಾಜಿ ಸಿಎಂಗಳಿಗೆ ನೀಡಿದ್ದ ಭದ್ರತೆ ವಾಪಸ್!

masthmagaa.com:

ಜಮ್ಮು ಕಾಶ್ಮೀರದ ನಾಲ್ವರು ಮಾಜಿ ಸಿಎಂಗಳಿಗೆ ನೀಡಲಾಗಿದ್ದ, ಎಸ್​​ಎಸ್​​ಜಿ ಭದ್ರತೆಯನ್ನು ವಾಪಸ್ ಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಫಾರೂಕ್ ಅಬ್ದುಲ್ಲಾ, ಅವರ ಮಗ ಒಮರ್ ಅಬ್ದುಲ್ಲಾ, ಪಿಡಿಪಿ ಪಕ್ಷದ ಮೆಹಬೂಬಾ ಮುಫ್ತಿ ಮತ್ತು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್​​​ಗೆ ನೀಡಲಾಗಿದ್ದ ಈ ಭದ್ರತೆಯನ್ನು ವಾಪಸ್ ಪಡೆಯಲು ಕೇಂದ್ರ ಸರ್ಕಾರದ ಭದ್ರತಾ ಪರಿಶೀಲನೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ವಿಶೇಷ ಭದ್ರತಾ ಪಡೆಯನ್ನು ಜಮ್ಮು ಕಾಶ್ಮೀರದ ಸಿಎಂ ಮತ್ತು ಮಾಜಿ ಸಿಎಂಗಳ ಭದ್ರತೆಗಾಗಿ ಸ್ಥಾಪಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರೋ ಮಾಜಿ ಸಿಎಂಗಳು, ನಮಗೆ ಈ ಬಗ್ಗೆ ಮಾಹಿತಿಯೇ ನೀಡಿಲ್ಲ. ಇದು ರಾಜಕೀಯ ಪ್ರೇರಿತ ನಿರ್ಧಾರ ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply