ಅಧ್ಯಕ್ಷನ ಕೊಂದ ಹೆಂಡತಿ! ಹೈಟಿಯಲ್ಲಿ ಶಾಕಿಂಗ್‌ ರಿಪೋರ್ಟ್‌!

masthmagaa.com:

2021ರಲ್ಲಿ ಹೈಟಿಯ ಅಧ್ಯಕ್ಷರಾಗಿದ್ದ ಜೋವೆನಿಲ್‌ ಮೋಯ್ಸೆ ಅವ್ರ ಹತ್ಯೆಯ ಆರೋಪಿಗಳು ಯಾರೆಂಬ ವಿಚಾರವಾಗಿ ಇದೀಗ ಶಾಕಿಂಗ್‌ ಮಾಹಿತಿ ಹೊರಬಿದ್ದಿದೆ. ಸ್ವತಃ ಅಧ್ಯಕ್ಷ ಜೋವೆನಿಲ್‌ ಮೋಯ್ಸೆ ಅವ್ರ ಪತ್ನಿ ಮಾರ್ಟಿನ್‌ ಮೋಯ್ಸೆ ಈ ಹತ್ಯೆಯಲ್ಲಿ ಭಾಗಿಯಾಗಿದ್ರು ಅನ್ನೋ ಬೆಚ್ಚಿಬೀಳಿಸೋ ವಿಚಾರ ಬಯಲಾಗಿದೆ. ಅಲ್ದೇ ಇವ್ರೊಂದಿಗೆ ಹೈಟಿಯ ಮಾಜಿ ಪ್ರಧಾನಿ ಕ್ಲಾಡ್‌ ಜೋಸೆಫ್‌ ಮತ್ತು ಹೈಟಿಯ ನ್ಯಾಷನಲ್‌ ಪೊಲೀಸ್‌ನ ಮಾಜಿ ಮುಖ್ಯಸ್ಥರಾದ ಲಿಯೊನ್‌ ಚಾರ್ಲ್ಸ್‌ ಕೂಡ ಸೇರ್ಕೊಂಡಿದ್ದಾರೆ. ಹೀಗಂತ 2021ರಲ್ಲಿ ಅಧ್ಯಕ್ಷ ಜೋವೆನಿಲ್‌ ಹತ್ಯೆಯ ತನಿಖೆ ನಡೆಸಿದ್ದ ಹೈಟಿ ಜಡ್ಜ್‌ ಆರೋಪ ಮಾಡಿದ್ದಾರೆ. ಅಂದ್ಹಾಗೆ 2021ರ ಜುಲೈನಲ್ಲಿ ಹೈಟಿ ಅಧ್ಯಕ್ಷರು ಖಾಸಗೀ ನಿವಾಸದಲ್ಲಿದ್ದಾಗ ಅವರನ್ನ ಯಾರೋ ಅಪರಿಚಿತರು ಮನೆಯೊಳಗೆ ನುಗ್ಗಿ ಹತ್ಯೆ ಮಾಡಿದ್ರು. ಈಗ ಅದರಲ್ಲಿ ಅಧ್ಯಕ್ಷನ ಹೆಂಡತಿಯೇ ಪಾಲುದಾರೆ ಅಂತ ಅಲ್ಲಿನ ಕೋರ್ಟ್‌ ಹೇಳಿದೆ.

-masthmagaa.com

Contact Us for Advertisement

Leave a Reply