masthmagaa.com:

ರಮೇಶ್ ಜಾರಕಿಹೊಳಿ ವಿಡಿಯೋ ಪ್ರಕರಣದಲ್ಲಿ ಅನುಮಾನಿತ ವ್ಯಕ್ತಿ ಎನಿಸಿಕೊಂಡಿದ್ದ ಮಾಜಿ ಪತ್ರಕರ್ತ ನರೇಶ್ ಇವತ್ತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ‘ರಮೇಶ್ ಜಾರಕಿಹೊಳಿ ಕೇಸ್​ನಲ್ಲಿ ನನ್ನ ಹೆಸರು ತಳುಕು ಹಾಕಿಕೊಂಡಿದೆ. ಇದನ್ನ ನೋಡಿದ್ರೆ ನಗಬೇಕೋ, ಅಳಬೇಕೋ ಗೊತ್ತಾಗ್ತಿಲ್ಲ. ಈ ಪ್ರಕರಣದಲ್ಲಿ ನನ್ನನ್ನ ಸಿಲುಕಿಸೋ ಹುನ್ನಾರ ನಡೀತಿದೆ. ವಿಚಾರಣೆಗೆ ಹಾಜರಾದ್ರೆ ಅಲ್ಲೇನಾಗುತ್ತೆ ಅಂತ ಗೊತ್ತಿದೆ. ಯಾವ ರೀತಿ ನನ್ನನ್ನ ಸಿಲುಕಿಸುತ್ತಾರೆ ಗೊತ್ತಿದೆ. ಹೀಗಾಗಿ ವಿಚಾರಣೆಗೆ ಹಾಜರಾಗಿಲ್ಲ. ವಿಡಿಯೋದಲ್ಲಿರೋ ಯುವತಿ ಜೊತೆ ನಾನ್ ಟಚ್​ನಲ್ಲಿ ಇದ್ದಿದ್ದು ನಿಜ. ರಮೇಶ್​ ಜಾರಕಿಹೊಳಿಯಿಂದ ನನಗೆ ಮೋಸ ಆಗಿದೆ. ಪತ್ರಕರ್ತರಾದ ನೀವು ನ್ಯಾಯ ಕೊಡಿಸಬೇಕು ಅಂತ ಯುವತಿ ಫೋನ್ ಮಾಡಿ ಕೇಳಿಕೊಂಡಿದ್ದಳು. ವಿಡಿಯೋ ಕ್ಲಿಪ್ಪಿಂಗ್ಸ್ ಏನಾದ್ರೂ ಇದ್ರೆ ಕಳಿಸಿ ಅಂತ ಯುವತಿಗೆ ಹೇಳಿದ್ದೆ. ಬಳಿಕ ನನ್ನ ತಾಯಿಗೆ ಹುಷಾರಿರಲಿಲ್ಲ. ನನ್ನ ಮಗುವಿನ ನಾಮಕರಣ ಕಾರ್ಯಕ್ರಮದಲ್ಲಿ ನಾನು ಬ್ಯುಸಿಯಾದೆ. ಆಕೆಯನ್ನ ಕೂಡ ನಾಮಕರಣಕ್ಕೆ ಕರೆದಿದ್ದೆ. ಆಕೆ ಮತ್ತು ಮೂರ್ನಾಲ್ಕು ಜನ ಬಂದು ಹೋಗಿದ್ರು. ಆ ಕಾರ್ಯಕ್ರಮದಲ್ಲಿ ಜೆಡಿಎಸ್​, ಬಿಜೆಪಿ, ಕಾಂಗ್ರೆಸ್​​ನವರು ಕೂಡ ಭಾಗಿಯಾಗಿದ್ರು. ನಾನೊಬ್ಬ ಪತ್ರಕರ್ತನಾಗಿ ಆಕೆಗೆ ಆವತ್ತೇ ನ್ಯಾಯ ಕೊಡಿಸಬೇಕಿತ್ತು. ಆದ್ರೆ ಸಾಕ್ಷ್ಯಗಳು ಸರಿಯಾಗಿರಲಿಲ್ಲ. ಹೀಗಾಗಿ ನಾನು ಯಾರ ಮೇಲೂ ಸುಮ್ಮನೆ ಆರೋಪ ಮಾಡಲಿಲ್ಲ. ನಾವಿಬ್ಬರು 15-20 ಸಲ ಮಾತನಾಡಿರಬಹುದು. ಆದ್ರೆ ಈ ಕೇಸಲ್ಲಿ ನಾನೇ ಸೂತ್ರಧಾರಿ ಅಂತ ಬಿಂಬಸಲಾಗ್ತಿದೆ. ರಮೇಶ್ ಜಾರಕಿಹೊಳಿಯನ್ನ ಸಂತ್ರಸ್ತ ಅನ್ನೋ ರೀತಿ, ಯುವತಿಯನ್ನ ಆರೋಪಿ ಎಂಬಂತೆ ಬಿಂಬಿಸಲಾಗ್ತಿದೆ. ಆಕೆಗೆ ಇನ್ನೂ 24-25 ವರ್ಷ ವಯಸ್ಸು. ನಾವು ಯುವತಿ ಪರವಾಗಿ ನಿಲ್ಲಬೇಕು. ವಿಡಿಯೋದಲ್ಲಿ ರಮೇಶ್​ ಜಾರಕಿಹೊಳಿ ಕನ್ನಡಿಗರನ್ನ ಅವಮಾನಿಸಿದ್ದಾರೆ. ಮಾಡಬಾರದ ಕೆಲಸ ಮಾಡಿರೋದು ಆ ರಮೇಶ್ ಜಾರಕಿಹೊಳಿ. ಆದ್ರೆ ಸಮಸ್ಯೆ ಆಗ್ತಿರೋದು ನಮಗೆ. ವಿಡಿಯೋ ವೈರಲ್​ ಆಗಿ ನನ್ನ ಮೊಬೈಲ್​ಗೆ ಬಂದಾಗಲೇ ನನಗೂ ಗೊತ್ತಾಗಿದ್ದು. ಅಯ್ಯೋ ಪಾಪ, ನನ್ನ ಬಳಿ ಬಂದಿದ್ದ ಯುವತಿ ಇವಳೇ ಅಲ್ವಾ ಅಂತ ಅನಿಸಿತ್ತು. ಈ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. 5 ಕೋಟಿ, 100 ಕೋಟಿ ದುಡ್ಡು ತಗೊಂಡಿದ್ದಾರೆ ಅಂತ ಹೇಳಲಾಗ್ತಿದೆ. ನನ್ನ ಪಾತ್ರವೇ ಇಲ್ಲ ಅಂದಮೇಲೆ ಈ ಆರೋಪದ ಬಗ್ಗೆ ಮಾತನಾಡಿ ಏನೂ ಪ್ರಯೋಜನವಿಲ್ಲ. ಆದ್ರೂ ಹೇಳ್ತೀನಿ.. 5 ಲಕ್ಷ ಲೋನ್​ ತಗೊಂಡಿದ್ದಕ್ಕೆ ಪ್ರತಿ ತಿಂಗಳು 15 ಸಾವಿರ ಇಎಂಐ ಕಟ್ತಾ ಇದ್ದೀನಿ. ಕ್ರೆಡಿಟ್​ ಕಾರ್ಡ್ ಬಿಲ್ ಕಟ್ಟೋಕೆ ದುಡ್ಡಿಲ್ಲ. ತುಮಕೂರಿನ ಶಿರಾ ತಾಲೂಕಿನಲ್ಲಿರೋ ನಮ್ಮ ಮನೆ ಈಗಲೂ ಸೋರ್ತಾ ಇದೆ. ಅಷ್ಟೆಲ್ಲಾ ದುಡ್ಡು ತಗೊಂಡಿದ್ರೆ ನನ್ನ ಪರಿಸ್ಥಿತಿನೇ ಬೇರೆ ಇರ್ತಿತ್ತು. 100 ಕೋಟಿ ತಗೊಂಡಿದ್ದೀನಿ ಅಂತಿದ್ದಾರಲಾ.. ಓಕೆ ಹಾಗಿದ್ರೆ, 100 ಕೋಟಿ ತಂದುಕೊಡಿ. ನಾನೇ ಅಂತ ಒಪ್ಪಿಕೊಳ್ತೀನಿ ಬೇಕಿದ್ರೆ. ಸದ್ಯದಲ್ಲೇ ಎಲ್ಲರ ಮುಂದೆ ಬರ್ತೀನಿ. ನಾನು ನಿರ್ದೋಷಿ ಅಂತ ಸಾಬೀತು ಮಾಡ್ತೀನಿ’ ಅಂತ ನರೇಶ್ ಹೇಳಿದ್ದಾನೆ. ಈತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆಗೆ ನಿಂತಿರೋ ಫೋಟೋ ವೈರಲ್ ಆಗಿತ್ತು. ಈತನಿಗೂ ಡಿಕೆಶಿಗೂ ಏನಾದ್ರೂ ಸಂಬಂಧವಿದೆಯಾ ಅಂತ ಬಿಜೆಪಿ ಅನುಮಾನ ವ್ಯಕ್ತಪಡಿಸಿತ್ತು.

-masthmagaa.com

Contact Us for Advertisement

Leave a Reply