ಸೌದಿ ಯುವರಾಜ ಮೊಹ್ಮದ್ ಬಿನ್ ಸಲ್ಮಾನ್ ಮೇಲೆ ಮತ್ತೊಂದು ‘ಕೊಲೆ’ ಕಂಟಕ!

masthmagaa.com:

ಸೌದಿ ಯುವರಾಜ ಮೊಹ್ಮದ್ ಬಿನ್ ಸಲ್ಮಾನ್ ನನ್ನ ಕೊಲೆಗೆ ಸಂಚು ಹೂಡಿದ್ರು ಅಂತ ಆರೋಪಿಸಿರೋ ವ್ಯಕ್ತಿಗೆ ಕಾನೂನು ಹೋರಾಟದಲ್ಲಿ ಮೊದಲ ಮುನ್ನಡೆ ಸಿಕ್ಕಿದೆ. 2018ರಲ್ಲಿ ಸೌದಿಯ ಮಾಜಿ ಅಧಿಕಾರಿ ಸಾದ್ ಅಲ್​ಜಬ್ರಿ ಒಂದು ಕೇಸ್ ದಾಖಲಿಸಿದ್ರು. ಪತ್ರಕರ್ತ ಜಮಾಲ್ ಕಶೋಗಿ ಹತ್ಯೆ ಬಳಿಕ ನನ್ನ ಹತ್ಯೆಗೂ ಸಂಚು ರೂಪಿಸಲಾಗಿತ್ತು. ಅಮೆರಿಕದಲ್ಲಿದ್ದ ನನ್ನ ಹುಡುಕಿ, ಹತ್ಯೆ ಮಾಡಲು ಟೀಂ ಕಳುಹಿಸಿದ್ರು. ಏರ್​​ಲೈನ್​​​​​ ದಾಖಲೆಗಳನ್ನು ಗಮನಿಸಿದ್ರೆ ಅವರ ಚಲನವಲದ ಬಗ್ಗೆ ಮಾಹಿತಿ ಸಿಗುತ್ತೆ ಅಂತ ಹೇಳಿದ್ರು. ಸದ್ಯ ಅಮೆರಿಕದ ಜಿಲ್ಲಾ ಕೋರ್ಟ್​ ಒಂದರ ಜಡ್ಜ್​​​​, ಈ ದಾಖಲೆಗಳನ್ನು ಸಂರಕ್ಷಿಸಿ ಇಡುವಂತೆ ಏರ್ ಕೆನಡಾ ಮತ್ತು ಲುಫ್ತಾನ್ಸಾ ಕಂಪನಿಗಳಿಗೆ ಆದೇಶಿಸಿದ್ದಾರೆ..

-masthmagaa.com

Contact Us for Advertisement

Leave a Reply