ಭಾರತದಲ್ಲಿ ಪ್ರತ್ಯೇಕ ಚಿಪ್‌ ತಯಾರಿಕಾ ಘಟಕ ತೆರೆಯೋಕೆ ಮುಂದಾದ ಫಾಕ್ಸ್‌ಕಾನ್‌!

masthmagaa.com:

ಭಾರತದ ವೇದಾಂತ್ ಕಂಪನಿ ಜೊತೆಯಲ್ಲಿ 1.61 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಸೆಮಿಕಂಡಕ್ಟರ್‌ ಚಿಪ್‌ ತಯಾರಿಕಾ ಒಪ್ಪಂದವನ್ನ ಫಾಕ್ಸ್‌ಕಾನ್‌ ರದ್ದುಗೊಳಿಸಿದೆ. ಅದರ ಬೆನ್ನಲ್ಲೇ ಭಾರತದಲ್ಲಿ ಪ್ರತ್ಯೇಕ ಚಿಪ್‌ ತಯಾರಿಕಾ ಘಟಕವನ್ನ ತೆರೆಯೋಕೆ ಫಾಕ್ಸ್‌ಕಾನ್‌ ಅಪ್ಲೈ ಮಾಡಲಿದೆ ಅಂತ ಕಂಪನಿ ಹೇಳಿಕೊಂಡಿದೆ. ನಾವು ಭಾರತದಿಂದ ಹೊರ ಹೋಗಲ್ಲ. ಕೇವಲ ವೇದಾಂತ ಕಂಪನಿಯ ಜೊತೆಗಿನ ಒಪ್ಪಂದ ಮಾತ್ರ ರದ್ದಾಗಿದೆ. ಆದ್ರೆ ಇತರ ಕಂಪನಿಗಳ ಜೊತೆ ಘಟಕ ತೆಗೆಯೋದಾಗಿ ಹಾಗೂ ಭಾರತದಲ್ಲಿನ ಎಲಾಕ್ಟ್ರಾನಿಕ್‌ ಕಂಪನಿಗಳ ಉತ್ಪಾದನೆಗೆ ಪ್ರೋತ್ಸಾಹ ನೀಡುವ PLI (product linked incentive)ಗೂ ಅಪ್ಲೈ ಮಾಡಲಿದೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply