ಐಫೆಲ್ ಟವರನಲ್ಲಿ UPI ಬಳಸಿ ಇಂಡಿಯನ್ ರೂಪಿ ಪೇ ಮಾಡ್ಬೋದು!

masthmagaa.com:

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯಲ್‌ ಮ್ಯಾಕ್ರಾನ್‌ ಭಾರತದ ಗಣರಾಜ್ಯೋತ್ಸವಕ್ಕೆ ಆಗಮಿಸಿ ಭಾರತ-ಫ್ರಾನ್ಸ್‌ ದೇಶಗಳ ಸಂಬಂಧವನ್ನ ಇನ್ನಷ್ಟು ಹೆಚ್ಚಿಸಿದ್ರು. ಇದ್ರ ಬೆನ್ನಲ್ಲೇ ಫ್ರಾನ್ಸ್‌ನ ಸುಪ್ರಸಿದ್ದ ಐಫೆಲ್ ಟವರ್‌ ನೋಡಲು ಹೋಗೊ ಭಾರತೀಯರಿಗೆ ಫ್ರಾನ್ಸ್‌ ಸಿಹಿ ಸುದ್ದಿಯೊಂದನ್ನ ನೀಡಿದೆ. ಐಫೆಲ್ ಟವರ್‌ ವೀಕ್ಷಣೆಗಾಗಿ ಟಿಕೆಟ್ ಪಡಿಯೊಕೆ ಇನ್ಮುಂದೆ UPI ಮೂಲಕ ಭಾರತೀಯ ರೂಪಾಯಿಯಲ್ಲಿ ಪೇಮೆಂಟ್ ಮಾಡ್ಬೋದು. ಈ ನಿಟ್ಟಿನಲ್ಲಿ ಲೈರಾ ಅನ್ನೊ ಫ್ರೆಂಚ್‌ ಪೇಮೆಂಟ್‌ ಕಂಪನಿಯೊಂದಿಗೆ ಟೈ-ಅಪ್‌ ಮಾಡ್ಕೊಳ್ಳಲಾಗಿದೆ ಅಂತ ನ್ಯಾಷನಲ್‌ ಪೇಮೆಂಟ್‌ ಕಾರ್ಪೋರೇಶನ್‌ ಆಫ್‌ ಇಂಡಿಯಾ (NPCI) ಹೇಳಿದೆ. ಅಲ್ದೇ ಈ ಮೂಲಕ ಭಾರತದ UPI ಪಾವತಿಗಳನ್ನ ಯುರೋಪಿನಾದ್ಯಂತ ಶುರು ಮಾಡೋ ಗುರಿ ಹೊಂದಲಾಗಿದೆ ಅಂತ NPCI ಹೇಳಿದೆ. ಅಂದ್ಹಾಗೆ ದಿನಕ್ಕೆ ಸುಮಾರು 25 ಸಾವಿರ ಜನ ಐಫೆಲ್ ಟವರ್‌ಗೆ ಭೇಟಿ ನೀಡ್ತಾರೆ. ಇಲ್ಲಿಗೆ ಬರೋ ಪ್ರವಾಸಿಗರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿ ಭಾರತ ಇದೆ.

-masthmagaa.com

Contact Us for Advertisement

Leave a Reply