ಸಿರಿಯಾ ಅಧ್ಯಕ್ಷನಿಗೆ ಫ್ರಾನ್ಸ್‌ನಿಂದ ಅರೆಸ್ಟ್‌ ವಾರೆಂಟ್‌! ಯಾಕೆ?

masthmagaa.com:

ಸಿರಿಯಾ ಅಧ್ಯಕ್ಷ ಬಶರ್‌ ಅಲ್‌-ಅಸ್ಸಾದ್‌ ವಿರುದ್ಧ ಫ್ರಾನ್ಸ್‌ ಅಂತಾರಾಷ್ಟ್ರೀಯ ಅರೆಸ್ಟ್‌ ವಾರೆಂಟ್‌ ನೀಡಿದೆ. 2013ರಲ್ಲಿ ಸಿರಿಯಾದಲ್ಲಿ ನಡೆದ ಭೀಕರ ಕೆಮಿಕಲ್‌ ಅಟ್ಯಾಕ್‌ನಲ್ಲಿ ಬಶರ್‌ ಅಲ್‌-ಅಸ್ಸಾದ್‌ ಅವ್ರು ಸೇರಿಕೊಂಡಿದ್ದಾರೆ ಅನ್ನೋ ಕಾರಣಕ್ಕೆ ವಾರೆಂಟ್‌ ನೀಡಲಾಗಿದೆ. ಜೊತೆಗೆ ಅಸ್ಸಾದ್‌ ಅವ್ರ ಸಹೋದರ ಮಹೇರ್‌ ಅಲ್‌-ಅಸ್ಸಾದ್‌ ಮತ್ತು ಸಿರಿಯಾದ ಇನ್ನಿಬ್ಬರು ಹಿರಿಯ ಅಧಿಕಾರಿಗಳಿಗೂ ಅರೆಸ್ಟ್‌ ವಾರೆಂಟ್‌ ಇಶ್ಯು ಮಾಡಲಾಗಿದೆ. ಈ ಕುರಿತು ದೂರು ಕೊಟ್ಟಿದ್ದ ಸಂಸ್ಥೆಯೊಂದು ಮಾತನಾಡಿ, ʻಒಂದು ದೇಶದ ನಾಯಕ ತಾನು ನಡೆಸಿದ ಅಪರಾಧಗಳಿಗೆ ಮತ್ತೊಂದು ದೇಶದ ಅರೆಸ್ಟ್‌ ವಾರೆಂಟ್‌ಗೆ ಒಳಗಾಗಿರೋದು ಇದೇ ಮೊದಲುʼ ಅಂತ ಹೇಳಿದೆ. ಈ ಕೆಮಿಕಲ್‌ ದಾಳಿಯಲ್ಲಿ ನಡೆದ ಭೀಕರ ಹತ್ಯೆ ಬಗ್ಗೆ ಬಹಳ ಕಾಳಜಿ ಹೊಂದಿರೋ ಫ್ರಾನ್ಸ್‌ ಕೋರ್ಟ್‌ ಈ ಕುರಿತು 2021 ರಿಂದ ತನಿಖೆ ನಡೆಸ್ತಾ ಇತ್ತು. ಅಂದ್ಹಾಗೆ 10 ವರ್ಷಗಳ ಹಿಂದೆ ಸಿರಿಯಾದಲ್ಲಿ ಅಂತರ್ಯುದ್ಧ ನಡೀತಿದ್ದ ಸಮಯದಲ್ಲಿ ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿ ಕೆಮಿಕಲ್‌ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ 1,400ಕ್ಕೂ ಹೆಚ್ಚು ಜನರು ಉಸಿರುಗಟ್ಟಿ ಸಾವನ್ನಪ್ಪಿದ್ರು.

-masthmagaa.com

Contact Us for Advertisement

Leave a Reply