ಆಸ್ಟ್ರೇಲಿಯಾ ಮೇಲಿನ ಸಿಟ್ಟು ಮರೆತು ಭಾಯಿ ಭಾಯಿ ಎಂದ ಫ್ರಾನ್ಸ್​!

masthmagaa.com:

ಆಸ್ಟ್ರೇಲಿಯಾ ಸಬ್​ಮರೀನ್ ಒಪ್ಪಂದ ಕ್ಯಾನ್ಸಲ್ ಮಾಡ್ಕೊಳ್ತು ಅಂತ ಸಿಟ್ಟು ಮಾಡ್ಕೊಂಡಿದ್ದ ಫ್ರಾನ್ಸ್ ಈಗ ಸ್ವಲ್ಪ ಕೂಲ್ ಆಗಿದೆ. ಆಸ್ಟ್ರೇಲಿಯಾದಿಂದ ವಾಪಸ್ ಕರೆಸಿಕೊಂಡಿದ್ದ ತನ್ನ ರಾಯಭಾರಿಯನ್ನು ಮತ್ತೆ ವಾಪಸ್ ಕಳುಹಿಸಿದೆ. ಈ ಮೂಲಕ ವಾರಗಳ ಕಾಲ ನಡೆದ ರಾಜತಾಂತ್ರಿಕ ಪ್ರತಿಭಟನೆಯನ್ನು ಫ್ರಾನ್ಸ್ ಅಂತ್ಯಗೊಳಿಸಿದೆ. ಅದರಂತೆ ಸೆಪ್ಟೆಂಬರ್ 17ರಂದು ಫ್ರಾನ್ಸ್​ಗೆ ವಾಪಸ್ ಆಗಿದ್ದ ಆಸ್ಟ್ರೇಲಿಯಾದ ರಾಯಭಾರಿ ಜೀನ್ ಪೀರಿ ಥೆಬೌಲ್ಟ್​ ಈಗ ಮತ್ತೆ ವಾಪಸ್ ಹೋಗಿದ್ದಾರೆ. ಇವರು ಆಸ್ಟ್ರೇಲಿಯಾ ಜೊತೆಗಿನ ನಮ್ಮ ಸಂಬಂಧ ಸರಿಪಡಿಸ್ತಾರೆ ಮತ್ತು ನಮ್ಮ ಹಿತಾಸಕ್ತಿಗಳನ್ನು ಕೂಡ ರಕ್ಷಿಸ್ತಾರೆ ಅಂತ ಫ್ರಾನ್ಸ್​ ವಿದೇಶಾಂಗ ಸಚಿವ ಜೀನ್ ವೆಸ್ ಲೇ ಡ್ರಿಯಾನ್ ಸಂಸತ್​ನಲ್ಲಿ ಘೋಷಿಸಿದ್ದಾರೆ. ಫ್ರಾನ್ಸ್​​ನ ಈ ನಿರ್ಧಾರವನ್ನು ಆಸ್ಟ್ರೇಲಿಯಾ ಕೂಡ ಸ್ವಾಗತಿಸಿದೆ. ಅಂದಹಾಗೆ ಇತ್ತೀಚೆಗೆ ಆಸ್ಟ್ರೇಲಿಯಾ ಫ್ರಾನ್ಸ್ ಜೊತೆಗಿನ 6500 ಕೋಟಿ ಡಾಲರ್ ಮೊತ್ತದ 12 ಸಬ್​ಮರೀನ್ ಖರೀದಿ ಒಪ್ಪಂದವನ್ನು ಕ್ಯಾನ್ಸಲ್ ಮಾಡ್ಕೊಂಡಿತ್ತು. ಬದಲಿಗೆ ಅಮೆರಿಕ ಮತ್ತು ಯುನೈಟೆಡ್ ಕಿಂಗ್​ಡಮ್ ಜೊತೆಗೆ ಪರಮಾಣು ಸಬ್​ಮರೀನ್ ಖರೀದಿಗಾಗಿ ಹೊಸ ಒಪ್ಪಂದ ಮಾಡ್ಕೊಂಡಿತ್ತು.

-masthmagaa.com

Contact Us for Advertisement

Leave a Reply