ಶಾಲೆ ಶುರುವಾಗ್ತಿದ್ದಂತೆ ಮಕ್ಕಳಿಗೆ ದಸರಾ ರಜೆ!

masthmagaa.com:

ಮೊನ್ನೆ ಮೊನ್ನೆಯಷ್ಟೆ ಮಕ್ಕಳಿಗೆ ತರಗತಿಗಳು ಪ್ರಾರಂಭವಾಗಿದೆ. ಇದೀಗ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಅಕ್ಟೋಬರ್‌ 10 ರಿಂದ 20ರವರೆಗೆ ದಸರಾ ರಜೆ ನೀಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇನ್ನು ಶಾಲೆಗಳ ಮೊದಲ ತ್ರೈಮಾಸಿಕ ಜುಲೈ 1ರಿಂದ ಅಕ್ಟೋಬರ್‌ 9ವರೆಗೆ ಹಾಗೂ ಎರಡನೇ ತ್ರೈಮಾಸಿಕ ಅಕ್ಟೋಬರ್‌ 21ರಿಂದ 2022ರ ಏಪ್ರೀಲ್‌ 30ರ ವರೆಗೆ ಅಂತ ನಿಗದಿಪಡಿಸಲಾಗಿದ್ದು, 2022ರ ಮೇ 1 ರಿಂದ ಮೇ 28ರ ವರೆಗೆ ಬೇಸಿಗೆ ರಜೆ ನಿಗದಿ ಪಡಿಸಲಾಗಿದೆ. ಇನ್ನು ಈ ವರ್ಷದ ದಸರಾ ಮಹೋತ್ಸವವು ಅಕ್ಟೋಬರ್‌ 7 ರಂದು ಬೆಳಿಗ್ಗೆ 8.15 ರಿಂದ 8.45 ರೊಳಗಿನ ಶುಭಮುಹೂರ್ತದಲ್ಲಿ ಉದ್ಘಾಟನೆ ಮಾಡಲಾಗುತ್ತೆ ಅಂತ ಸಹಕಾರ ಸಚಿವ ಎಸ್​ಟಿ ಸೋಮಶೇಖರ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply