ಪಾಕಿಸ್ತಾನವನ್ನ ಉಳಿಸಲು ವ್ಯವಸಾಯಕ್ಕೆ ಕೈ ಹಾಕಿದ ಪಾಕ್‌ ಸೇನೆ!

masthmagaa.com

ಆರ್ಥಿಕ ಬಿಕ್ಕಟ್ಟನ್ನ ಫೇಸ್‌ ಮಾಡ್ತಿರುವ ಪಾಕಿಸ್ತಾನದ ಆಡಳಿತವನ್ನ ಡೈರೆಕ್ಟ್‌ ಆರ್‌ ಇಂಡೈರೆಕ್ಟ್‌ ಆಗಿ ಅಲ್ಲಿನ ಸೇನೆ ನಡೆಸೋದು ಹೊಸ ವಿಷಯವೇನಲ್ಲ. ಇದೀಗ ಪಾಕ್‌ ಆರ್ಥಿಕತೆಯನ್ನ ಮೇಲೆತ್ತಲು ಮುಂದಾಗಿರುವ ಅಲ್ಲಿನ ಸೇನೆ ಕೃಷಿಯಲ್ಲಿ ತೊಡಗಿಸಿಕೊಳ್ಳೋಕೆ ಮುಂದಾಗಿದ್ದು 10 ಲಕ್ಷ ಎಕರೆ ಜಮೀನು ವಶಪಡಿಸಿಕೊಳ್ಳೋಕೆ ತಯಾರಾಗಿದೆ. ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಹಾಗೂ ಬಡತನದಿಂದ ತತ್ತರಿಸಿ ಹೋಗಿರೋ ಪಾಕಿಸ್ತಾನದ ಜನರನ್ನ ಕಾಪಾಡಲು ಸೇನೆ ವ್ಯವಸಾಯ ಮಾಡಲಿದೆ ಅಂತ ನಿಕ್ಕಿ ಏಷ್ಯಾ ವರದಿ ಮಾಡಿದೆ.. ಈ ಹಿನ್ನಲೆಯಲ್ಲಿ ಪಂಜಾಬ್‌ ಪ್ರಾಂತ್ಯದ ಸುಮಾರು 10 ಲಕ್ಷ ಎಕರೆ ಭೂಮಿಯನ್ನ ಸೇನೆ ವಶಪಡಿಸಿಕೊಳ್ಳಲಿದೆ. ಈ ಭಾಗದಲ್ಲಿ ಗೋಧಿ, ಹತ್ತಿ ಮತ್ತು ಕಬ್ಬು ಬೆಳೆಗಳನ್ನ ಬೆಳೆಯಲು ಭೂಮಿಯನ್ನ 30 ವರ್ಷಗಳ ಕಾಲ ಲೀಸ್‌ಗೆ ತೆಗೆದುಕೊಳ್ಳಲಿದೆ ಅಂತ ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಈ ಬೆಳೆಗಳ ಮಾರಾಟದಿಂದ ಬರುವ ಲಾಭದಲ್ಲಿ ಶೇ. 20ರಷ್ಟು ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಮೀಸಲಿಡಲಾಗಿದೆ. ಉಳಿದ ಹಣವನ್ನು ಸೇನೆ ಮತ್ತು ಸರ್ಕಾರ ಸಮನಾಗಿ ಹಂಚಿಕೊಳ್ಳಲಿದೆ. ಅಂದ್ಹಾಗೆ ಬಡವರಿಗೆ ಆಹಾರ ಭದ್ರತೆ ಒದಗಿಸಲು ಈ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ ಅಂತ ಸೇನೆ ಹೇಳಿಕೊಂಡಿದೆ. ಆದರೆ, ಸೇನೆ ಗ್ರಾಮೀಣ ಬಡವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಅನ್ನೋ ಟೀಕೆಗಳು ವ್ಯಕ್ತವಾಗಿದೆ. ಪಾಕಿಸ್ತಾನದಲ್ಲಿ ಸುಮಾರು 2.5 ಕೋಟಿ ಜನರು ಬಡವರು ಮತ್ತು ಭೂರಹಿತರಾಗಿರುವ ಈ ಸಮಯದಲ್ಲಿ, ಒಂದಲ್ಲ, ಎರಡಲ್ಲ, ಹತ್ತು ಲಕ್ಷ ಎಕರೆ ಕೃಷಿ ಭೂಮಿ ಸೇನೆಯ ಕೈಗೆ ಹೋಗುತ್ತದೆ ಅಂತ ಪಾಕಿಸ್ತಾನದ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply