ಪೆಟ್ರೋಲ್,​ ಡೀಸೆಲ್ ತುಟ್ಟಿ: ಬಿಜೆಪಿ ಗುಳ್ಳೆ ನರಿ ಎಂದ ಸಿದ್ಧರಾಮಯ್ಯ

masthmagaa.com:

ನಿನ್ನೆಯಷ್ಟೇ 137 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದ್ದು ನಿಮಗೆಲ್ಲಾ ಗೊತ್ತಿದೆ. ಇವತ್ತು ಮತ್ತೆ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಪೆಟ್ರೋಲ್ ಪ್ರತಿ ಲೀಟರ್​​ಗೆ 84 ಪೈಸೆ, ಡೀಸೆಲ್ ಪ್ರತಿ ಲೀಟರ್​ಗೆ 78 ಪೈಸೆ ಏರಿಕೆಯಾಗಿದೆ. ಈ ಮೂಲಕ ಬೆಂಗಳೂರಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 102 ರೂಪಾಯಿ 26 ಪೈಸೆ ಆಗಿದ್ರೆ, ಡೀಸೆಲ್ ಬೆಲೆ 86 ರೂಪಾಯಿ 58 ಪೈಸೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಮಾಜಿ ಸಿಎಂ ಸಿದ್ದರಾಮಯ್ಯ, ತೈಲ ದರ ಏರಿಸಲು ಐದು ರಾಜ್ಯಗಳ ಚುನಾವಣೆ ಮುಗಿಯೋದನ್ನೇ ಬಿಜೆಪಿ ಗುಳ್ಳೆ ನರಿಯಂತೆ ಕಾದು ಕುಳಿತಿತ್ತು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply