ದೆಹಲಿಯಲ್ಲಿ ಕೊರೋನಾ ಕಠಿಣ ನಿಯಮ ಜಾರಿ!

masthmagaa.com:

ಕೊರೋನಾ ನಿರಂತರವಾಗಿ ಏರುತ್ತಿರುವ ಬೆನ್ನಲ್ಲೇ ದೆಹಲಿಯಲ್ಲಿ ಹೊಸ ನಿರ್ಬಂಧಗಳನ್ನು ಹೇರಲಾಗಿದೆ. ಈಗಾಗಲೇ ಇಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಹೇರಲಾಗಿದೆ. ಅದ್ರ ಜೊತೆಗೆ ಈಗ ಮದುವೆಗೆ 50 ಮತ್ತು ಅಂತ್ಯಕ್ರಿಯೆಗೆ 20ಕ್ಕಿಂತ ಹೆಚ್ಚು ಜನ ಸೇರಂಗಿಲ್ಲ. ರೆಸ್ಟೋರಂಟ್​, ಬಾರ್, ಸಿನಿಮಾ ಥಿಯೇಟರ್​​, ಬಸ್ ಮತ್ತು ಮೆಟ್ರೋ ಶೇ.50ರಷ್ಟು ಜನರೊಂದಿಗೆ ಕಾರ್ಯ ನಿರ್ವಹಿಸಬೇಕು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಾಗಿ ಅಭ್ಯಾಸ ನಡೆಸಲಾಗ್ತಿರೋ ಸ್ವಿಮ್ಮಿಂಗ್ ಪೂಲ್ ಹೊರತುಪಡಿಸಿ ಉಳಿದೆಲ್ಲಾ ಸ್ವಿಮ್ಮಿಂಗ್ ಪೂಲ್ ಬಂದ್​ ಮಾಡಬೇಕು. ಸ್ಟೇಡಿಯಂಗಳಲ್ಲಿ ಪಂದ್ಯಗಳನ್ನು ನಡೆಸಬಹುದಾದ್ರೂ, ವೀಕ್ಷಕರಿಗೆ ಅವಕಾಶ ನೀಡುವಂತಿಲ್ಲ. ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ಕೊರೋನಾ ಟೆಸ್ಟ್ ಮಾಡಿಸಿ ನೆಗೆಟಿವ್ ರಿಪೋರ್ಟ್​ ಹಿಡಿದುಕೊಂಡೇ ಬರಬೇಕು. ಇಲ್ಲವಾದ್ರೆ ದೆಹಲಿಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇಡಲಾಗುತ್ತೆ. ಸರ್ಕಾರಿ ಕೆಲಸದ ನಿಮಿತ್ತ ದೆಹಲಿ ಬರುವವರಿಗೆ ವಿನಾಯಿತಿ ನೀಡಲಾಗಿದೆ. ಈ ನಿರ್ಬಂಧಗಳು ಏಪ್ರಿಲ್ 30ರವರೆಗೆ ಮುಂದುವರಿಯಲಿದೆ ಅಂತ ದೆಹಲಿ ಸರ್ಕಾರ ಹೇಳಿದೆ. ಇಲ್ಲಿ ಕಳೆದ 24 ಗಂಟೆಯಲ್ಲಿ 10,738ಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ಅತ್ತ ಉತ್ತರ ಪ್ರದೇಶದಲ್ಲಿ ಧಾರ್ಮಿಕ ಸ್ಥಳಗಳಲ್ಲಿ 5ಕ್ಕಿಂತ ಹೆಚ್ಚು ಜನ ಸೇರಬಾರದು ಅಂತ ಆದೇಶಿಸಲಾಗಿದ್ದು, ಶಾಲಾ-ಕಾಲೇಜು, ಕೋಚಿಂಗ್ ಸೆಂಟರ್​​ಗಳನ್ನು ಕೂಡ ಬಂದ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply