ಭಾರತ ಭದ್ರತಾ ಮಂಡಳಿ ಸೇರಬೇಕು: ವಿಶ್ವಸಂಸ್ಥೆ

masthmagaa.com:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗುವ ಭಾರತದ ಇಚ್ಛೆಯನ್ನ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರೋದಾಗಿ ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ ಹೇಳಿದ್ದಾರೆ. ಇದೇ ವೇಳೆ ಭದ್ರತಾ ಮಂಡಳಿಯಲ್ಲಿ ಯಾರು ಇರ್ಬೇಕು ಅಥ್ವಾ ಯಾರು ಇರ್ಬಾರ್ದು ಅಂತ ಡಿಸೈಡ್‌ ಮಾಡೋದು ನಾನಲ್ಲ. ಯಾಕಂದ್ರೆ ಅದು ಸದಸ್ಯ ರಾಷ್ಟ್ರಗಳಿಗೆ ಬಿಟ್ಟದ್ದು. ಆದ್ರೆ ಪ್ರಸ್ತುತ ಜಗತ್ತನ್ನ ಪ್ರತಿನಿಧಿಸುವ ಭದ್ರತಾ ಮಂಡಳಿ ಇರಬೇಕು ಅಂತ ನಾನು ನಂಬುತ್ತೇನೆ ಅಂತ ಗುಟೆರಸ್‌ ಹೇಳಿದ್ದಾರೆ. ಜೊತೆಗೆ ಈಗಿರುವ ಭಧ್ರತಾ ಮಂಡಳಿ ಎರಡನೇ ವಿಶ್ವ ಯುದ್ಧ ಆದ್ಮೇಲಿನ ಪ್ರಪಂಚವನ್ನ ಪ್ರತಿನಿಧಿಸುತ್ತೆ. ಆದ್ರೆ ಈಗಿನ ಜಗತ್ತೇ ಬೇರೆಯಾಗಿದ್ದು, ಭಾರತ ಅತಿಹೆಚ್ಚು ಜನಸಂಖ್ಯೆಯಿರುವ ದೊಡ್ಡ ಕಂಟ್ರಿಯಾಗಿದೆ. ಈ ನಿಟ್ಟಿನಲ್ಲಿ ಭಾರತದ ಇಚ್ಛೆ ಸರಿಯಾಗಿದ್ದು, ಭದ್ರತಾ ಮಂಡಳಿಯನ್ನ ಇನ್ನೊಮ್ಮೆ ಕಂಪೋಸ್‌ ಮಾಡುವ ಅಗತ್ಯವಿದೆ ಅಂತ ಹೇಳುವ ಮೂಲಕ ಭದ್ರತಾ ಮಂಡಳಿಗೆ ಸೇರುವ ಭಾರತದ ಇಚ್ಛೆಗೆ ಗುಟೆರಸ್‌ ಸಪೋರ್ಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply