2700 ವರ್ಷಗಳ ಹಿಂದೆಯೇ ಚೀಸ್​, ಬಿಯರ್ ಅಸ್ತಿತ್ವದಲ್ಲಿತ್ತಾ..?

masthmagaa.com:

ಈಗ ಹೆಚ್ಚಿನ ಫಾಸ್ಟ್​​ಫುಡ್​ಗಳಲ್ಲಿ ಚೀಸ್ ಹಾಕೇ ಹಾಕ್ತಾರೆ.. ಅದ್ರಲ್ಲೂ ಚೀಸ್ ಇಲ್ಲದೇ ಪೀಟ್ಜಾ ಮಾಡಕ್ಕೆ ಆಗಲ್ಲ.. ಇದೀಗ ಅಧ್ಯಯನವೊಂದ್ರಲ್ಲಿ ಆಸ್ಟ್ರಿಯಾದ ಜನ 2700 ವರ್ಷಗಳ ಹಿಂದೆಯೇ ಬ್ಲೂ ಚೀಸ್ ತಿಂತಿದ್ರು. ಬಿಯರ್ ಕುಡೀತಿದ್ರು ಅಂತ ಗೊತ್ತಾಗಿದೆ. ಆಸ್ಟ್ರಿಯಾದ ಹಾಲ್​ಸ್ಟಾಟ್​​​ ಗಣಿಯಲ್ಲಿ ವಿಜ್ಞಾನಿಗಳು ಮನುಷ್ಯನ ಮಲ ಪತ್ತೆಹಚ್ಚಿದ್ದಾರೆ. ಇದ್ರ ಸ್ಯಾಂಪಲ್ ಪರೀಕ್ಷೆ ನಡೆಸಿದಾಗ ಈ ವಿಚಾರ ಗೊತ್ತಾಗಿದೆ. ಇದ್ರ ವರದಿಯನ್ನು ಕರೆಂಟ್ ಬಯಾಲಜಿ ಅನ್ನೋ ಜರ್ನಲ್​​ನಲ್ಲಿ ಪ್ರಕಟಿಸಲಾಗಿದೆ. ಆಗಿನ ಜನ ಇಷ್ಟೊಂದು ಮುಂದುವರಿದಿದ್ರು, ಆಧುನಿಕವಾಗಿದ್ರು ಅನ್ನೋದನ್ನ ನಾನು ನಿರೀಕ್ಷಿಸಿರಲಿಲ್ಲ ಅಂತ ಅಧ್ಯಯನದ ಮುಖ್ಯ ತಜ್ಞ ಫ್ರಾಂಕ್ ಮೇಕ್ಸರ್ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply