ಬೆಂಗಳೂರು: ಜಿ20 ರಾಷ್ಟ್ರಗಳ ಇಂಧನ ಪರಿವರ್ತನಾ ಕಾರ್ಯಕಾರಿ ಗುಂಪಿನ ಸಭೆ!

masthmagaa.com:

ಜಿ20 ರಾಷ್ಟ್ರಗಳ Energy Transition Working Group (ETWG) ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಫೆಬ್ರುವರಿ 5 ರಿಂದ 7ರವರೆಗೆ ಮೂರು ದಿನಗಳ ನಡೆಯಲಿದೆ ಅಂತ ಕೇಂದ್ರ ಇಂಧನ ಸಚಿವಾಲಯದ ಕಾರ್ಯದರ್ಶಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ. ಭಾರತಕ್ಕೆ 2023ರ ಜಿ20 ಗುಂಪಿನ ಅಧ್ಯಕ್ಷತೆ ಸಿಕ್ಕಿರೋದ್ರಿಂದ ದೇಶಾದ್ಯಂತ ಹಲವು ಸಭೆಗಳನ್ನ ಆಯೋಜಿಸಲಾಗ್ತಿದೆ. ಅದ್ರ ಭಾಗವಾಗಿ ಎನರ್ಜಿ ಟ್ರಾನ್ಸಿಷನ್‌ಗೆ ಸಂಬಂಧಿಸಿದ ಸಭೆ ನಿಗದಿಪಡಿಸಲಾಗಿದೆ. ಇನ್ನು ಸಭೆಯಲ್ಲಿ ಜಿ20 ರಾಷ್ಟ್ರಗಳು, ವಿಶ್ವ ಬ್ಯಾಂಕ್‌, ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಮತ್ತು ಯುಎನ್‌ಡಿಪಿ ಸೇರಿದಂತೆ ಅಂತರಾಷ್ಟ್ರೀಯ ಪ್ರಮುಖ ಸಂಸ್ಥೆಗಳು ಸಭೆಯಲ್ಲಿ ಪಾಲ್ಗೊಳ್ಳಲಿವೆ ಅಂತ ಅಲೋಕ್‌ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply