ಜಿ20 ನಾಯಕರ ಸಭೆಯಲ್ಲಿ ಅಫ್ಘಾನ್​ಗೆ ನೆರವು ನೀಡಲು ಸಹಮತ!

masthmagaa.com:

ಜಿ20 ನಾಯಕರ ಸಭೆಯಲ್ಲಿ ಸಂಕಷ್ಟದಲ್ಲಿರೋ ಅಫ್ಘನಿಸ್ತಾನ ಜನತೆಗೆ ಸಹಾಯ ಮಾಡಲು ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ಇದೇ ವೇಳೆ ಯೂರೋಪಿಯನ್ ಯೂನಿಯನ್ ಸುಮಾರು 8೫೦೦ ಕೋಟಿ ರೂಪಾಯಿಗಳ ನೆರವಿನ ಪ್ಯಾಕೇಜ್ ಘೋಷಿಸಿದೆ. ಈ ಮೀಟಿಂಗ್ನ ಆತಿಥ್ಯ ವಹಿಸಿದ್ದ ಎಟಲಿ, ತಾಲಿಬಾನ್ ಜೊತೆ ಸಂಪರ್ಕ ವ್ಯವಸ್ಥೆ ಹೊಂದಿರೋದು ತುಂಬಾ ಮುಖ್ಯ ಅಂತ ಸಾರಿ ಸಾರಿ ಹೇಳಿದೆ.
ಕತಾರ್ ನ ದೋಹಾದಲ್ಲಿ ಅಮೆರಿಕ-ಯೂರೋಪ್ ಪ್ರತಿನಿಧಿಗಳೊಂದಿಗೆ ತಾಲಿಬಾನ್ ಮಾತುಕತೆ ನಡೆಸ್ತಿದ್ದ ಟೈಮಲ್ಲೇ, ಅಮೆರಿಕದ ಬೈಡೆನ್, ಟರ್ಕಿಯ ಎರ್ಡೋಆನ್, ಭಾರತದ ಪಿಎಂ ಮೋದಿ G20 ಸಭೆಯಲ್ಲಿ ವರಚುವಲ್ ಆಗಿ ಭಾಗಿಯಾದ್ರು.

-masthmagaa.com

Contact Us for Advertisement

Leave a Reply