ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ವಿಶ್ವ ನಾಯಕರು!

masthmagaa.com:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಕೂಡ ಜಿ20 ಶೃಂಗಸಭೆ ಕಂಟಿನ್ಯೂ ಆಗಿದೆ. ಇಂದು ಬೆಳಗ್ಗೆ ಮಳೆಯ ನಡುವೆಯೇ ವಿಶ್ವ ನಾಯಕರು ದೆಹಲಿಯಲ್ಲಿರುವ ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿಜಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಜಾಗತಿಕ ನಾಯಕರಿಗೆ ಸಾಥ್‌ ನೀಡಿದ್ದಾರೆ. ಇನ್ನು ನಿನ್ನೆ ಭಾರತ ಮಂಟಪದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವ್ರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಡಿನ್ನರ್‌ನಲ್ಲಿ ಗ್ಲೋಬಲ್‌ ಲೀಡರ್ಸ್‌ ಭಾಗವಹಿಸಿದ್ದು, ಭಾರತದ ವಿವಿಧ ಖಾದ್ಯಗಳನ್ನ ಸವಿದಿದ್ದಾರೆ. ಈ ವೇಳೆ ಜಪಾನ್‌ ಪ್ರಧಾನಿ ಫುಮಿಯೋ ಕಿಶಿದಾ ಅವ್ರ ಪತ್ನಿ ಸೇರಿದಂತೆ ಹಲವರು ಭಾರತೀಯ ಉಡುಗೆಯಲ್ಲಿ ಕಾಣಿಸಿದ್ದು, ವಿಶೇಷವಾಗಿದೆ. ಇನ್ನು ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಅಲ್ಬನೀಸ್‌ ಅವ್ರು ಮೋದಿಯವರ ಜೊತೆ ತೆಗೆದುಕೊಂಡ ಸೆಲ್ಫಿಯೊಂದನ್ನ ಶೇರ್‌ ಮಾಡಿದ್ದು, ಜಿ20 ಸಭೆ ಸಕ್ಸಸ್‌ ಆಗಿದೆ ಅಂತ ಬರೆದುಕೊಂಡಿದ್ದಾರೆ. ಇನ್ನು ಕೊನೆಯ ದಿನದ ಸಭೆ ಆರಂಭವಾಗ್ತಿದ್ದಂತೆ ಕಳೆದ ವರ್ಷದ ಜಿ20 ಶೃಂಗಸಭೆ ಆಯೋಜಿಸಿದ್ದ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೊಡೊ ಮತ್ತು ಮುಂದಿನ ವರ್ಷ ಸಭೆ ಆಯೋಜಿಸಲಿರುವ ಬ್ರೆಜಿಲ್‌ ಅಧ್ಯಕ್ಷ ಲುಲಾ ಅವ್ರು, ಮೋದಿಯವರಿಗೆ ತಲಾ ಒಂದು ಸಸಿ ಹಸ್ತಾಂತರಿಸಿದ್ದಾರೆ. ಬಳಿಕ ಜಿ20 ಶೃಗಸಭೆಯ ಒನ್‌ ಫ್ಯೂಚರ್‌ ಅಡಿಯಲ್ಲಿ ನಡೆದ ಕೊನೆಯ ಸೆಷನ್‌ನಲ್ಲಿ ಮಾತಾಡಿದ ಮೋದಿ, ಸಭೆಯನ್ನ ಮುಕ್ತಾಯಗೊಳಿಸಿ ಲುಲಾ ಅವ್ರಿಗೆ ಮುಂದಿನ ಅಧ್ಯಕ್ಷತೆಯ ಸಾಂಕೇತಿಕವಾಗಿ ದಂಡವನ್ನ ಹಸ್ತಾಂತರ ಮಾಡಿದ್ದಾರೆ.

ಇನ್ನೊಂದ್‌ ಕಡೆ ಕ್ಲೈಮೇಟ್‌ ಚೇಂಜ್‌ನ್ನ ಟ್ಯಾಕಲ್‌ ಮಾಡಲು ಇರುವ ಗ್ರೀನ್‌ ಕ್ಲೈಮೇಟ್‌ ಫಂಡ್‌ಗೆ 2 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 16,400 ಕೋಟಿ ರೂಪಾಯಿ ನೀಡೋದಾಗಿ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಅನೌನ್ಸ್‌ ಮಾಡಿದ್ದಾರೆ.

ಇತ್ತ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆ ಯಶಸ್ವಿಯಾಗಿದ್ದು, ಸಭೆಯ ದೆಹಲಿ ಘೋಷಣೆಯನ್ನ ಎಲ್ಲಾ ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡಿವೆ ಅಂತ ನಿನ್ನೆ ಮೋದಿಯವರು ಅನೌನ್ಸ್‌ ಮಾಡಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ಜಿ20 ಸಭೆಯ ಶೆರ್ಪಾ ಅಮಿತಾಬ್‌ ಕಾಂತ್‌, ಈ ಘೋಷಣೆಯನ್ನ ಎಲ್ಲಾ ನಾಯಕರು ಅದ್ರಲ್ಲೂ ರಷ್ಯಾ ಯುದ್ಧದ ಬಗ್ಗೆ ಇರೋದ್ರಿಂದ ರಷ್ಯಾ ಹಾಗೂ ಚೀನಾ ಜೊತೆಯಲ್ಲಿ ಸುದೀರ್ಘವಾದ ಚರ್ಚೆ ನಡೆಸಲಾಗಿತ್ತು. ಈ ಘೋಷಣೆಯ ಒಮ್ಮತಕ್ಕಾಗಿ ಸುಮಾರು 200 ಗಂಟೆಗಳ ಕಾಲ ಮಾತುಕತೆಗಳನ್ನ ನಡೆಸಲಾಗಿತ್ತು. ಅಲ್ದೆ ಮೊದಲೆರಡು ಡ್ರಾಫ್ಟ್‌ಗಳಿಗೆ ಜಿ7 ರಾಷ್ಟ್ರಗಳು ಮತ್ತು ರಷ್ಯಾ, ಚೀನಾಗಳಿಂದ ಆಕ್ಷೇಪಗಳು ಕೇಳಿ ಬಂದಿತ್ತು. ಆದ್ರೆ ನಮಗೆ ಯುದ್ಧದ ವಿಚಾರಕ್ಕಿಂದ ಅಭಿವೃದ್ಧಿಯ ವಿಚಾರಗಳ ಬಗ್ಗೆ ಹೆಚ್ಚು ಕಾಳಜಿಯಿತ್ತು. ಹೀಗಾಗಿ ಕೊನೆ ಘಳಿಗೆಯಲ್ಲಿ ಲಾಸ್ಟ್‌ ಡ್ರಾಫ್ಟ್‌ನ್ನ ಶೆರ್ಪಾ ಮೀಟಿಂಗ್‌ನಲ್ಲಿ ಇಡಲಾಗಿತ್ತು. ಆ ಟೈಮ್‌ನಲ್ಲಿ ಇದು ಕೊನೆಯ ಡ್ರಾಫ್ಟ್‌ ಆಗಿದ್ದು, ಯಾರಿಗಾದ್ರು ಅಭ್ಯಂತರವಿದ್ರೆ ನಿಮ್ಮ ಲೀಡರ್‌ಗಳು ನಮ್ಮ ಲೀಡರ್‌ ಜೊತೆ ಮಾತಾಡಬಹುದು ಅಂತ ಹೇಳಿದೆ. ಆಗ ಕೊನೆ ಟೈಮ್‌ನಲ್ಲಿ ರಷ್ಯಾ, ಚೀನಾ ಸೇರಿದಂತೆ ಎಲ್ಲರು ಒಪ್ಪಿಗೆ ಸೂಚಿಸಿದರು ಅಂತ ಕಾಂತ್‌ ಹೇಳಿದ್ದಾರೆ.
ಅತ್ತ ಜಿ20 ಘೋಷಣೆಯನ್ನ ರಷ್ಯಾ ಸ್ವಾಗತಿಸಿದ್ದು, ಬ್ಯಾಲೆನ್ಸ್ಡ್‌ ಆಗಿದೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply