ಚೀನಾ ವಿರುದ್ಧ ಜಿ7 ರಾಷ್ಟ್ರಗಳ ಒಗ್ಗಟ್ಟು!

masthmagaa.com:

ಯುನೈಟೆಡ್​ ಕಿಂಗ್​ಡಮ್​​ನ ಕಾರ್ನ್​​ವೆಲ್​​ನಲ್ಲಿ ಜಿ7 ಶೃಂಗಸಭೆ ಅಂತ್ಯಗೊಂಡಿದೆ. ಕೊನೆಯ ದಿನವಾದ ನಿನ್ನೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ವಿಶ್ವದ ಬಡದೇಶಗಳಿಗೆ ಲಸಿಕೆ ಪೂರೈಸೋದು, ಚೀನಾಗೆ ಪಾಠ ಕಲಿಸೋದು, ಕೊರೋನಾ, ಮಾನವ ಹಕ್ಕುಗಳು ಮತ್ತು ಮಾರುಕಟ್ಟೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೀತು. ಅದ್ರಲ್ಲೂ ಎಲ್ಲಾ ದೇಶಗಳು ಚೀನಾದ ವಿರುದ್ಧ ಕೆಂಡ ಉಗುಳಿದ್ದು ಗಮನ ಸೆಳೀತು.. ಕೊರೋನಾ ಮೂಲದ ಕುರಿತು ವಿಶ್ವಆರೋಗ್ಯ ಸಂಸ್ಥೆ ತಜ್ಞರು ಪಾರದರ್ಶಕವಾಗಿ ತನಿಖೆ ನಡೆಸಬೇಕು. ವುಹಾನ್ ಲ್ಯಾಬ್​ನಿಂದಲೇ ಕೊರೋನಾ ಹರಡಿದ್ದಾ ಅಥವಾ ಇಲ್ವಾ ಅನ್ನೋದನ್ನ ಪತ್ತೆಹಚ್ಚಬೇಕು ಅಂತ ಒತ್ತಾಯಿಸಿವೆ. ಅದೇ ರೀತಿ ಶಿಂಜಿಯಾಂಗ್​​​​ ಮತ್ತು ಹಾಂಗ್​ಕಾಂಗ್​​​​ನಲ್ಲಿ ಮಾನವ ಹಕ್ಕುಗಳನ್ನು ಗೌರವಿಸಬೇಕು ಅಂತ ಒತ್ತಾಯಿಸಿದ್ದಾರೆ. ಅದ್ರಲ್ಲೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಂತೂ ಚೀನಾದ ವಿರುದ್ಧ ನೇರವಾಗಿ ಹೋರಾಡ್ತೀವಿ ಅಂತ ಘೋಷಿಸಿದ್ದಾರೆ. ಬೈಡೆನ್ ಘೋಷಣೆಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್​​​​ ಮತ್ತು ಫ್ರಾನ್ಸ್​ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್​​ ಒಂದು ಹಂತಕ್ಕೆ ಬೆಂಬಲಿಸಿದ್ದಾರೆ. ಉಳಿದ ದೇಶಗಳು ಹಲವು ವಿಚಾರಗಳಲ್ಲಿ ಅಮೆರಿಕಾಗೆ ಬೆಂಬಲಿಸಿದ್ರೂ ಚೀನಾ ವಿಚಾರದಲ್ಲಿ ಅಷ್ಟೊಂದು ಬೆಂಬಲ ನೀಡಲಿಲ್ಲ. ಆದ್ರೆ ಮಾರುಕಟ್ಟೆ ವಿಚಾರದಲ್ಲಿ ಚೀನಾಗೆ ಸವಾಲಾಗಿ ನಿಲ್ಲಲು ಎಲ್ಲಾ ದೇಶಗಳು ಒಟ್ಟಾಗಿ ನಿರ್ಣಯಿಸಿವೆ. ಚೀನಾದ ಬೆಲ್ಟ್ ರೋಡ್ ಇನಿಶಿಯೇಟಿವ್ ಅಂದ್ರೆ ಬಿಆರ್​ಐಗೆ ಟಕ್ಕರ್ ಕೊಡಲು ಬಿ3ಡಬ್ಲ್ಯೂ ಅಂದ್ರೆ ಬಿಲ್ಡ್​​ ಬ್ಯಾಕ್ ಬೆಟರ್ ಫರ್ ದ ವರ್ಲ್ಡ್​​​​​ ಪ್ಲಾನ್​​​​​ನ್ನು ಮುಂದಿಟ್ಟಿದೆ ಅಮೆರಿಕ. ಬೆಲ್ಟ್​ & ರೋಡ್ ಇನಿಶಿಯೇಟಿವ್ ಮೂಲಕ ಚೀನಾ, ರೈಲ್ವೆ, ರಸ್ತೆ ಮತ್ತು ಸಮುದ್ರ ಮಾರ್ಗ ಅಭಿವೃದ್ಧಿಪಡಿಸಿ, ತನ್ನ ವ್ಯಾಪಾರ ಸಾಮ್ರಾಜ್ಯವನ್ನು ಏಷ್ಯಾದಿಂದ ಯೂರೋಪ್​​ವರೆಗೂ ವಿಸ್ತರಿಸಲು ಯತ್ನಿಸ್ತಿದೆ. ಅದೇ ರೀತಿ ಬಿ3ಡಬ್ಲ್ಯೂ ಬಡ ದೇಶಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸೋಕೆ 40 ಲಕ್ಷ ಕೋಟಿ ಡಾಲರ್​​ ದುಡ್ಡು ಖರ್ಚು ಮಾಡುವ ಪ್ಲಾನ್​​​​​​​​. ಈ ಬಗ್ಗೆ ಮಾತನಾಡಿರೋ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್​​, ಜಿ7 ದೇಶಗಳು ಪ್ರಜಾಪ್ರಭುತ್ವದಿಂದ ಹಿಡಿದು ತಂತ್ರಜ್ಞಾನದವರೆಗೆ ಚೀನಾದ ಸ್ಪರ್ಧೆಯನ್ನು ಎದುರಿಸಲು ನಿರ್ಧರಿಸಿವೆ ಅಂತ ಹೇಳಿದ್ದಾರೆ. ಇವರು ಇಷ್ಟೆಲ್ಲಾ ಹೇಳ್ತಿದ್ರೆ ಚೀನಾ ಸುಮ್ನೆ ಇರುತ್ತಾ..? ಇಡೀ ವಿಶ್ವಕ್ಕೆ ಸಂಬಂಧಿಸಿದಂತೆ ಸಣ್ಣ ಗುಂಪು ನಿರ್ಣಯ ಕೈಗೊಳ್ಳುವ ದಿನಗಳು ಕಳೆದು ಹೋಗಿವೆ ಅಂತ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್​​ನಲ್ಲಿ ಹೇಳಿದೆ.

-masthmagaa.com

Contact Us for Advertisement

Leave a Reply