ಮಾನವ ಸಹಿತ ಮಿಷನ್‌ ʻಗಗನಯಾನʼ ಟೆಸ್ಟ್‌ ಲ್ಯಾಂಡಿಂಗ್‌ ಸಕ್ಸಸ್‌!

masthmagaa.com:

ದೇಶದ ಬಹುನಿರೀಕ್ಷಿತ ಮಾನವ ಸಹಿತ ಬಾಹ್ಯಾಕಾಶ ಯೋಜನೆ ʻಗಗನಯಾನʼ ನೌಕೆಯ ರಿಕವರಿ ಲ್ಯಾಂಡಿಗ್‌ನ್ನ ಯಶಸ್ವಿಯಾಗಿ ಟೆಸ್ಟ್‌ ಮಾಡಲಾಗಿದೆ. ಇಸ್ರೋ ಹಾಗೂ ನೌಕಾಪಡೆ ಜುಲೈ 20ರಂದು ಜಂಟಿಯಾಗಿ ವಿಶಾಖಪಟ್ಟಣ ಬಂದರಿನಲ್ಲಿ ಕಾರ್ಯಾಚರಣೆ ನಡೆಸಿವೆ. ಮಾನವ ಸಹಿತ ಗಗನಯಾನ ನೌಕೆ ತನ್ನ ಕಾರ್ಯಾಚರಣೆ ಮುಗಿಸಿದ ಬಳಿಕ, ಗಗನಯಾನಿಗಳ ಸಮೇತ ಭೂಮಿಗೆ ಮರಳಿ ಸಮುದ್ರದಲ್ಲಿ ಇಳಿಯಲಿದೆ. ಇದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಮಾಡಲು ಕಾರ್ಯಾಚರಣೆ ನಡೆಸಲಾಗಿದೆ ಅಂತ ಇಸ್ರೋ ಹೇಳಿದೆ.

-masthmagaa.com

Contact Us for Advertisement

Leave a Reply