ಕಲರ್ಸ್‌ ಕನ್ನಡದಲ್ಲಿ ʻಗಂಡ ಹೆಂಡ್ತಿʼ ಧಾರಾವಾಹಿ ಶುರು !

masthmagaa.com:

ಕಲರ್ಸ್‌ ಕನ್ನಡದಲ್ಲಿ ʻಗಂಡ ಹೆಂಡ್ತಿʼ ಎಂಬ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಈ ಧಾರಾವಾಹಿ ಮದುವೆಗೂ ಮುಂಚೆ ಒಡಲಲ್ಲಿ ಮಗುವನ್ನು ಇಟ್ಟುಕೊಂಡು ಪರದಾಡುತ್ತಿರುವ ಅಪರಂಜಿ ಹುಡುಗಿಯ ಕಥೆಯಾಗಿದೆ.

ಕಲರ್ಸ್‌ ಕನ್ನಡ ವಾಹಿನಿ ʻಗಂಡ ಹೆಂಡ್ತಿʼ ಧಾರಾವಾಹಿಯ ಪ್ರೊಮೋ ಬಿಡುಗಡೆ ಮಾಡಿದೆ. ಮದುವೆಯಾಗದ ಅಪರಂಜಿ ಹುಡುಗಿ ಒಡಲಲ್ಲಿ ಕಂದಮ್ಮನನ್ನು ಇಟ್ಟುಕೊಂಡು ಮದುವೆಯಾಗಲೆಂದು ಮದುವೆ ರೆಜಿಸ್ಟರ್‌ ಆಫೀಸ್‌ ಮುಂದೆ ಕಾಯುತ್ತಿರುತ್ತಾಳೆ. ಹುಡುಗಿ ರೆಜಿಸ್ಟರ್‌ ಆಫೀಸ್‌ಗೆ ಹೋದಾಗ ಆಫೀಸ್‌ ಬಾಗಿಲು ಇನ್ನು ತೆರೆದಿರುವುದಿಲ್ಲ. ಬೆಳಗ್ಗೆ ಅಷ್ಟು ಬೇಗ ಮದುವೆ ತಯಾರಿ ಮಾಡಿಕೊಂಡು ಹೋಗಿರುತ್ತಾಳೆ. ಕೈಯಲ್ಲಿ ಎರಡು ಹಾರ ಹಾಗೂ ಮದುವೆ ಫೈಲ್‌ ಹಿಡಿದುಕೊಂಡು ಆಫೀಸ್‌ ಗೇಟ್‌ ಮುಂದೆ ನಿಂತಿರುತ್ತಾಳೆ.

ಅಟೆಂಡರ್‌ ಬಂದು ಅವಳನ್ನು ಮಾತನಾಡಿಸಿ ʻಎನಮ್ಮಾ ಇಷ್ಟು ಬೇಗ ಬಂದಿದ್ದೀಯಾ, ಇವತ್ತು ನಾಲ್ಕು ಮದುವೆ ಇವೆʼ ಎಂದು ಅವಸರದಲ್ಲಿ ಆಫೀಸ್‌ ಬಾಗಿಲು ತೆರೆದು ಒಳಗಡೆ ಹೋಗುತ್ತಾನೆ. ಹುಡುಗನಿಗಾಗಿ ಕಾಯುತ್ತಾ ಅವಳು ರೆಜಿಸ್ಟರ್‌ ಆಫೀಸ್‌ ಹೊರಗಡೆಯೇ ನಿಂತಿರುತ್ತಾಳೆ. ರೆಜಿಸ್ಟರ್‌ ಆಫೀಸ್‌ಗೆ ಬೇರೆ ಎಲ್ಲಾ ಜೋಡಿಗಳು ಬಂದು ಖುಷಿಯಾಗಿ ಮಾದುವೆಯಾಗಿ ಹೋಗುತ್ತಿರುತ್ತಾರೆ.

ಸಂಜೆಯಾದರು ಹುಡುಗನಿಗಾಗಿ ಕಾಯುತ್ತಾ ಗೇಟ್‌ ಬಳಿ ನಿಂತಿರುತ್ತಾಳೆ. ರೆಜಿಸ್ಟರ್‌ ಆಫೀಸ್‌ನ ಬಾಗಿಲು ಮುಚ್ಚುವ ಸಮಯವಾಗುತ್ತದೆ, ಸರ್ಕಾರಿ ಅಧಿಕಾರಿಗಳೆಲ್ಲಾ ಮನೆಗೆ ಹೋಗುವ ಸಮಯವಾಗುತ್ತದೆ. ಇವಳು ಮಾತ್ರ ಇನ್ನು ನಿರೀಕ್ಷೆಯಲ್ಲಿಯೇ ಇರುತ್ತಾಳೆ. ಕೊನೆಗೆ ಆಫೀಸ್‌ ಬಾಗಿಲು ಮುಚ್ಚಿ ಎಲ್ಲರೂ ಮನೆಗೆ ಹೋಗುತ್ತಾರೆ. ಬೆಳಗ್ಗೆ ಅವಳನ್ನು ಮಾತನಾಡಿಸಿದ ಅಟೆಂಡರ್‌ ಬಂದು ʻಏನಮ್ಮಾ ಹುಡುಗ ಬರಲಿಲ್ವಾ , ಗರ್ಭಿಣಿ ಹುಡುಗಿ ನೀನು, ಹೀಗೆಲ್ಲಾ ಒಬ್ಬಬ್ಬಳೇ ನಿಲ್ಲಬಾರದು, ಮನೆಗ ಹೋಗಮ್ಮಾʼ ಎಂದು ಹೇಳಿ ಹೋಗ್ತಾರೆ.

ಇದಷ್ಟು ಪ್ರೊಮೋದಲ್ಲಿ ಕೊಟ್ಟಿರುವ ಧಾರಾವಾಹಿಯ ಸುಳಿವು. ಇನ್ನು ಅಪ್ಪಟ ಅಪರಂಜಿ ಹುಡುಗಿ ಮದುವೆಗೂ ಮುಂಚೆ ಮಗುವಿಗೆ ಜನ್ಮ ನೀಡಿ ಸಮಾಜವನ್ನು ಹೇಗೆ ಎದುರಿಸುತ್ತಾಳೆ ಎಂಬುದನ್ನು ಕಾದುನೋಡಬೇಕು.

-masthmagaa.com

Contact Us for Advertisement

Leave a Reply