ಮೈಸೂರು ಸಾಮೂಹಿಕ ಅತ್ಯಾಚಾರದ ಬಗ್ಗೆ ಸಿಕ್ಕಿತು ಮೊದಲ ಸುಳಿವು?

masthmagaa.com:

ಮೈಸೂರು ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಆರೋಪಿಗಳ ಬಗ್ಗೆ ಮೊದಲ ಸುಳಿವು ಸಿಕ್ಕಿದೆ ಎನ್ನಲಾಗ್ತಿದೆ. ಮೈಸೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಕೇರಳ ಅಥವಾ ತಮಿಳುನಾಡು ಮೂಲದ ನಾಲ್ವರು ವಿದ್ಯಾರ್ಥಿಗಳ ಮೇಲೆ ಅನುಮಾನ ಮೂಡಿದೆ ಅಂತ ವರದಿಯಾಗಿದೆ. ಇದಕ್ಕೆ ಹಲವು ಕಾರಣಗಳಿದೆ.. ಮೊದಲನೇದು ಅನುಮಾನ ಮೂಡಿರೋ ವಿದ್ಯಾರ್ಥಿಗಳ ಮೊಬೈಲ್​ ಲೊಕೇಶನ್ ಅತ್ಯಾಚಾರ ನಡೆದ ಪ್ರದೇಶದ ಟವರ್ ಲೊಕೇಶನ್​​ನಲ್ಲಿ ಸಿಕ್ಕಿದೆ ಎನ್ನಲಾಗ್ತಿದೆ. ಎರಡನೇದು, ಅತ್ಯಾಚಾರ ಆಗಿದ್ದು ಮಂಗಳವಾರ ರಾತ್ರಿ. ಬುಧವಾರ ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಇತ್ತಂತೆ. ಆದ್ರೆ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ರು. ಮೂರನೇದು, ವಿದ್ಯಾರ್ಥಿಗಳು ಮೈಸೂರಿನಲ್ಲಿ ತಾವಿದ್ಧ ರೂಮನ್ನ ಖಾಲಿ ಮಾಡಿ ಹೋಗಿದ್ದಾರಂತೆ. ನಾಲ್ಕನೇದಾಗಿ, ಅತ್ಯಾಚಾರ ಸಂತ್ರಸ್ತೆಯ ಗೆಳೆಯ ನೀಡಿರೋ ಹೇಳಿಕೆ ಪ್ರಕಾರ ಅತ್ಯಾಚಾರಿಗಳು ತಮಿಳು ಅಥವಾ ಮಲಯಾಳಂ ಭಾಷೆ ಮಾತಾಡ್ತಿದ್ರಂತೆ. ಈ ಎಲ್ಲಾ ಕಾರಣಗಳಿಂದ ಇದೀಗ ನಾಲ್ವರು ಇಂಜಿನಿಯರಿಂಗ್​ ಸ್ಟೂಡೆಂಟ್ಸ್ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ ಎನ್ನಲಾಗ್ತಿದೆ. ಆದ್ರೆ ಇದ್ರಲ್ಲಿ ಯಾವುದೂ ಸ್ಪಷ್ಟವಿಲ್ಲ. ನಾಲ್ವರ ಪೈಕಿ ಮೂವರು ಕೇರಳ ಮೂಲದವರಾಗಿದ್ರೆ, ಓರ್ವ ತಮಿಳುನಾಡು ಮೂಲದವನು ಎನ್ನಲಾಗ್ತಿದೆ. ಹೀಗಾಗಿ ಪೊಲೀಸರು ವಿದ್ಯಾರ್ಥಿಗಳ ಜಾಡುಹಿಡಿದು ಕೇರಳ, ತಮಿಳುನಾಡಿಗೆ ಹೋಗಿದ್ದಾರೆ ಅಂತಾನೂ ವರದಿಯಾಗಿದೆ. ಮತ್ತೊಂದುಕಡೆ ಅತ್ಯಾಚಾರ ಸಂತ್ರಸ್ತೆಯ ಪೋಷಕರು ಹೊರರಾಜ್ಯದಿಂದ ಬೆಂಗಳೂರಿಗೆ ಬಂದಿದ್ದಾರೆ.

-masthmagaa.com

Contact Us for Advertisement

Leave a Reply