ಮಯನ್ಮಾರ್ ಸೇನೆ ವಿರುದ್ಧ ಜನರಿಂದ ‘ಗಾರ್ಬೇಜ್ ಸ್ಟ್ರೈಕ್’!

masthmagaa.com:

ಮಯನ್ಮಾರ್​ನಲ್ಲಿ ಫೆಬ್ರವರಿ 1ರ ಸೇನಾ ಕ್ಷಿಪ್ರಕ್ರಾಂತಿ ವಿರೋಧಿಸಿ, ಪ್ರಜಾಪ್ರಭುತ್ವ ಪರವಾಗಿ ನಡೆಯುತ್ತಿರೋ ಪ್ರತಿಭಟನೆಯಲ್ಲಿ ಇದುವರೆಗೆ 500ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಪ್ರತಿಭಟನಾಕಾರರು ಇವತ್ತು ಸೇನಾ ಆಡಳಿತವನ್ನ ವಿರೋಧಿಸಿ ‘ಗಾರ್ಬೇಜ್ ಸ್ಟ್ರೈಕ್​’ ನಡೆಸಿದ್ದಾರೆ. ಮಯನ್ಮಾರ್ ರಾಜಧಾನಿ ನೈಪಿಡಾ ಸೇರಿದಂತೆ ಹಲವೆಡೆ ರಸ್ತೆಗಳ ಮೇಲೆ ಕಸ ಸುರಿದು ಪ್ರತಿಭಟನೆ ನಡೆಸಿದ್ದಾರೆ. ಅಂದ್ಹಾಗೆ ಕಸವನ್ನ ಸರಿಯಾಗಿ ವಿಲೇವಾರಿ ಮಾಡಿ ಅಂತ ಅಧಿಕಾರಿಗಳು ಸೋಮವಾರ ಮೈಕ್​ನಲ್ಲಿ ಅನೌನ್ಸ್ ಮಾಡಿದ್ರು. ಅದೆಲ್ಲಾ ಆಗಲ್ಲ ಅಂತ ಜನರೀಗ ರಸ್ತೆ ಮೇಲೆ ಯರ್ರಾಬಿರ್ರಿ ಕಸ ಹಾಕಿ ಪ್ರೊಟೆಸ್ಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply